ವಿಜಯಪುರ: ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿಗಳು ನಗರದಲ್ಲಿ ಎರಡು ದಿನ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ಹಾಗೂ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ವಿಜಯಪುರದಲ್ಲಿ ತಂಬಾಕು ಉತ್ಪನ್ನವಿರುವ ಅಂಗಡಿಗಳ ಮೇಲೆ ದಾಳಿ - Ride on tobacco production shop
ವಿಜಯಪುರದಲ್ಲಿ ತಂಬಾಕು ನಿಯಂತ್ರಣ ಅಧಿಕಾರಿಗಳು ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
![ವಿಜಯಪುರದಲ್ಲಿ ತಂಬಾಕು ಉತ್ಪನ್ನವಿರುವ ಅಂಗಡಿಗಳ ಮೇಲೆ ದಾಳಿ ಅಂಗಡಿಗಳ ಮೇಲೆ ದಾಳಿ](https://etvbharatimages.akamaized.net/etvbharat/prod-images/768-512-5454793-thumbnail-3x2-sdfh.jpg)
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಲ್ಲನಗೌಡ ಬಿ ಬಿರಾದಾರ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಗಾಂಧಿ ಚೌಕ್ ಪೊಲೀಸ್ ಠಾಣೆ ಹಾಗೂ ಗೋಲ್ ಗುಮ್ಮಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ತಂಬಾಕು ಸೇವನೆಯಿಂದ ಆಗಬಹುದಾದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಸೆಕ್ಷನ್ 4ರ ಅಡಿಯಲ್ಲಿ 64 ಪ್ರಕರಣ ದಾಖಲಿಸಿ, 5,200 ರೂ. ದಂಡ, ಸೆಕ್ಷನ್ 6(ಎ)ಅಡಿಯಲ್ಲಿ 30 ಪ್ರಕರಣ ದಾಖಲಿಸಿ 2,700 ರೂ. ದಂಡ, ಸೆಕ್ಷನ್ 6 (ಬಿ) ಅಡಿಯಲ್ಲಿ 12 ಪ್ರಕರಣ ದಾಖಲಿಸಿ 1000 ರೂ. ದಂಡ ವಿಧಿಸಲಾಗಿದೆ. 106 ಪ್ರಕರಣಗಳನ್ನು ದಾಖಲಿಸಿ 8,900 ರೂ. ದಂಡ ವಸೂಲಿ ಮಾಡಲಾಗಿದೆ. 11 ತಂಬಾಕು ಜಾಹೀರಾತು ಫಲಕಗಳನ್ನು ತೆರವು ಗೊಳಿಸಲಾಗಿದೆ.