ವಿಜಯಪುರ: ಸಾಲಬಾಧೆ ತಾಳಲಾರದೆ ನಿವೃತ್ತ ಯೋಧರೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಕಕ್ಕಳಮೇಲ ಗ್ರಾಮದಲ್ಲಿ ನಡೆದಿದೆ. ನಿವೃತ್ತ ಯೋಧ ರೇವಣಸಿದ್ದಪ್ಪ ಗಾಣಿಗೇರ ಅಲಿಯಾಸ್ ದೇಸಾಯಿ ಮೃತ ಯೋಧ ಎಂದು ತಿಳಿದುಬಂದಿದೆ.
ರೇವಣಸಿದ್ದಪ್ಪ ಸೇನೆಯಿಂದ ನಿವೃತ್ತರಾದ ಮೇಲೆ ಗ್ರಾಮದಲ್ಲಿ ಸಾಲ ಮಾಡಿ ಜಮೀನು ಖರೀದಿಸಿದ್ದು, ಮಾಡಿದ ಸಾಲವನ್ನು ತೀರಿಸಲಾಗದೇ ಹೊಲದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.