ವಿಜಯಪುರ :ರಾಜ್ಯಕ್ಕೆ ಜೆ.ಪಿ.ನಡ್ಡಾ, ಬಿ.ಎಲ್.ಸಂತೋಷ್ ಆಗಮಿಸಿದ ಬಳಿಕ ಬಿಜೆಪಿಯ ಚುನಾವಣಾ ರಣತಂತ್ರ ಬದಲಾಗಿದೆ. ಪಕ್ಷ ಸೇರ್ಪಡೆಯಾಗುತ್ತಿರುವರ ಸಂಖ್ಯೆ ಹೆಚ್ಚಾಗುತ್ತಿದೆ. ಬಿಜೆಪಿ ಸೇರುವ ಉದ್ದೇಶದಿಂದ ಲೋಕಾಯುಕ್ತ ಪೊಲೀಸ್ ಹುದ್ದೆಗೆ ಮಹೇಂದ್ರ ನಾಯಕ್ ರಾಜೀನಾಮೆ ನೀಡಿದ್ದಾರೆ. ನಾಗಠಾಣ ಮೀಸಲು ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷೆಯಾಗಿರುವ ಇವರು ಇದೀಗ ಚುನಾವಣಾ ಸಿದ್ದತೆಯಲ್ಲಿದ್ದಾರೆ.
ಲೋಕಾಯುಕ್ತ ಸಿಪಿಐ ಹುದ್ದೆಗೆ ಮಹೇಂದ್ರ ನಾಯಕ್ ರಾಜೀನಾಮೆ: ಬಿಜೆಪಿಯಿಂದ ಸ್ಪರ್ಧಿಸಲು ಕಸರತ್ತು - ಜೆಡಿಎಸ್ ಶಾಸಕ ದೇವಾನಂದ ಚೌಹಾಣ್
ಬಿಜೆಪಿ ಸೇರ್ಪಡೆಯಾಗುವ ಉದ್ದೇಶದಿಂದ ಪೊಲೀಸ್ ಅಧಿಕಾರಿ ಮಹೇಂದ್ರ ನಾಯಕ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಬಾಗಲಕೋಟೆಯಲ್ಲಿ ಲೋಕಾಯುಕ್ತ ಸಿಪಿಐ ಆಗಿ ಮಹೇಂದ್ರ ನಾಯಕ್ ಕೆಲಸ ಮಾಡುತ್ತಿದ್ದರು. ಸಚಿವ ಗೋವಿಂದ ಕಾರಜೋಳ ಪುತ್ರ ಗೋಪಾಲ ಕಾರಜೋಳ ಅವರೂ ಆಕಾಂಕ್ಷಿಯಾಗಿರುವ ನಾಗಠಾಣ ಕ್ಷೇತ್ರದಲ್ಲಿ ಇವರು ಸ್ಪರ್ಧಿಸುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಜಿಲ್ಲೆಯಲ್ಲಿ ಜನಬೆಂಬಲ ಇರುವ ವ್ಯಕ್ತಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಬಿ.ಎಲ್.ಸಂತೋಷ್ ಜಿಲ್ಲೆಯ ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದರು. ಬಿ.ಎಲ್.ಸಂತೋಷ್ ಸಲಹೆ ನೀಡಿದ ಎರಡೇ ದಿನವೇ ರಾಜೀನಾಮೆ ನೀಡಿ ಪಕ್ಷಕ್ಕೆ ಸೇರ್ಪಡೆಯಾಗಲು ಮಹೇಂದ್ರ ನಾಯಕ್ ಮುಂದಾಗಿದ್ದಾರೆ. ಪ್ರಸ್ತುತ ಜೆಡಿಎಸ್‌ನ ದೇವಾನಂದ ಚೌಹಾಣ್ ಈ ಕ್ಷೇತ್ರದ ಶಾಸಕರಾಗಿದ್ದಾರೆ.
ಇದನ್ನೂ ಓದಿ:ಬಜೆಟ್: ರಾಜ್ಯದ ನಿರೀಕ್ಷೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ: ಸಿಎಂ ಬೊಮ್ಮಾಯಿ