ಕರ್ನಾಟಕ

karnataka

ETV Bharat / state

ವಿಜಯಪುರ: ಬಾಕಿ ವೇತನ‌ ನೀಡುವಂತೆ ಪ್ರತಿಭಟನೆ... - Organization of residential school leasing employees

ವಸತಿ ನಿಲಯಗಳಲ್ಲಿ ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಸಕಾಲಕ್ಕೆ ವೇತನ ಪಾವತಿಸಿಲ್ಲ. 6 ತಿಂಗಳ ವೇತನ ಬಾಕಿ ಉಳಿಸಿಕೊಂಡ ಪರಿಣಾಮ ಹೊರಗುತ್ತಿಗೆ ಕಾರ್ಮಿಕರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ ಎಂದು ವಸತಿ ಶಾಲಾ ಗುತ್ತಿಗೆ ನೌಕರರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Residential School Leasing Employees Organization Workers
ಬಾಕಿ ವೇತನ‌ ನೀಡುವಂತೆ ಪ್ರತಿಭಟನೆ.

By

Published : Sep 10, 2020, 6:31 PM IST

ವಿಜಯಪುರ: ಸರ್ಕಾರಿ ವಸತಿ ನಿಲಯಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಗುತ್ತಿಗೆ ನೌಕರರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಾಕಿ ವೇತನ‌ ನೀಡುವಂತೆ ಪ್ರತಿಭಟನೆ.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹಾಸ್ಟೆಲ್ ಹೊರ ಗುತ್ತಿಗೆ ನೌಕರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಸರ್ಕಾರ, ವಸತಿ ನಿಲಯಗಳಲ್ಲಿ ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ. ಸಕಾಲಕ್ಕೆ ವೇತನ ಪಾವತಿಸಿಲ್ಲ. 6 ತಿಂಗಳ ವೇತನ ಬಾಕಿ ಉಳಸಿಕೊಂಡ ಪರಿಣಾಮ ಹೊರಗುತ್ತಿಗೆ ಕಾರ್ಮಿಕರು ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು‌.

ಹಾಗೆಯೇ ಇ ಎಸ್‌ ಐ, ಪಿ ಎಫ್ ನ್ನು ಎಲ್ಲ ನೌಕರರಿಗೂ ವಿಸ್ತರಣೆ ಮಾಡಬೇಕು. ಹೊರಗುತ್ತಿಗೆ ಆಧಾರಿತವಾಗಿ ದುಡಿಯುತ್ತಿರುವ ನೌಕರರಿಗೆ ಏಜನ್ಸಿಗಳಿಂದ ವೇತನ ಕೊಡಿಸಬೇಕು‌‌. ಇತ್ತ ಖಾಯಂ ನೌಕರರ ವರ್ಗಾವಣೆ ಆರಂಭವಾಗಿದ್ದೂ ಗುತ್ತಿಗೆ ಆಧಾರಿತವಾಗಿ ದುಡಿಯುತ್ತಿರುವ ಹಾಸ್ಟೆಲ್​‌ ನೌಕರರ ಸ್ಥಳಕ್ಕೆ ವರ್ಗ ಮಾಡದಂತೆ ಪ್ರತಿಭಟನಾಕಾರರು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details