ವಿಜಯಪುರ:ಕಳೆದ ಕೆಲವು ತಿಂಗಳಿಂದ ವ್ಯವಹಾರವಿಲ್ಲದೇ ನಷ್ಟದಲ್ಲಿರುವ ಕೇಂದ್ರ ಬಸ್ ನಿಲ್ದಾಣ ಮಳಿಗೆಗಳ ಬಾಡಿಗೆ ಮನ್ನಾ ಮಾಡುವಂತೆ ಮಳಿಗೆ ಮಾಲೀಕರ ಒಕ್ಕೂಟ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೇಂದ್ರ ಬಸ್ ನಿಲ್ದಾಣದಲ್ಲಿರುವ ಮಳಿಗೆ ರೆಂಟ್ ಮನ್ನಾ ಮಾಡಿ: ಡಿಸಿಗೆ ಬಾಡಿಗೆದಾರರ ಮನವಿ - ವಿಜಯಪುರ ಮಳಿಗೆ ಬಾಡಿಗೆ ಮನ್ನಾ ಮಾಡುವಂತೆ ಮನವಿ ಸುದ್ದಿ
ಗ್ರಾಹಕರಿಲ್ಲದೇ ಆರ್ಥಿಕ ಸಂಕಷ್ಟದಲ್ಲಿ ನಲಗುತ್ತಿರುವ ಮಳಿಗೆ ಮಾಲೀಕರ 6 ತಿಂಗಳ ಬಾಡಿಗೆ ಮನ್ನಾ ಮಾಡುವಂತೆ ಆಗ್ರಹಿಸಿ ಮಳಿಗೆ ಮಾಲೀಕರ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ
ಅಂಗಡಿ ಮಾಲೀಕರು ಕಳೆದ ಕೆಲವು ತಿಂಗಳಿಂದ ಕೊರೊನಾ ಹಾವಳಿ ಆರಂಭದ ದಿನದಿಂದಲೂ ಸರಿಯಾದ ವ್ಯಾಪಾರವಿಲ್ಲದೇ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಇತ್ತ ಅಂಗಡಿ ಕೂಲಿಕಾರರಿಗೆ ಸಂಬಳ ನೀಡಲು ಹಣವಿಲ್ಲದಂತಾಗಿದೆ. ಕೇಂದ್ರ ಬಸ್ ನಿಲ್ದಾಣಕ್ಕೆ ಜನರು ಬಾರದೇ ಸಂಕಷ್ಟ ಅನುಭವಿಸುತ್ತಿರುವ, ಮಳಿಗೆ ಬಾಡಿಗೆದಾರರ ನೆರವಿಗೆ ಬರುವಂತೆ ನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅಪರ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದರು.