ವಿಜಯಪುರ: ಜಿಲ್ಲೆಯಬೇನಾಳ ಆರ್.ಎಸ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡವರಿಗೆ ಅಂಬೇಡ್ಕರ್ ಹೆಸರಿನಲ್ಲಿ ಮಂಜೂರಾದ ನಿರ್ಮಾಣವಾಗುತ್ತಿರುವ ಮನೆಗಳಿಗೆ ಹಣ ಬಿಡುಗಡೆ ಮಾಡುವಂತೆ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ಬೇನಾಳ ಪಂಚಾಯತ್ ವ್ಯಾಪ್ತಿಗೆ ಬರುವ ಮೂರ್ನಾಲ್ಕು ಹಳ್ಳಿಗಳಿಗೆ 180ಕ್ಕೂ ಅಧಿಕ ಮನೆಗಳು ಕಳೆದ ವರ್ಷ ಮಂಜೂರಾಗಿವೆ. ಇನ್ನು ಫಲಾನುಭವಿಗಳು ಮನೆಗಳ ಕಟ್ಟಡ ಪ್ರಾರಂಭಿಸಿದ್ದರೂ ಇದುವರೆಗೆ ಸಂಬಂಧಿಸಿದ ಅಧಿಕಾರಿಗಳು ಒಂದು ವರ್ಷವಾದರೂ ಹಣ ಬಿಡುಗಡೆ ಮಾಡಿಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.