ಮುದ್ದೇಬಿಹಾಳ:ಪಟ್ಟಣಕ್ಕೆ ಭೇಟಿ ನೀಡಿದ್ದ ಹುಬ್ಬಳ್ಳಿ ನೈರುತ್ಯ ರೈಲ್ವೆ ಕಮರ್ಷಿಯಲ್ ಇನ್ಸ್ಪೆಕ್ಟರ್ ವಿ.ಬಿ. ಗ್ರಾಮಪುರೋಹಿತ ಅವರಿಗೆ ಅಡತ್ ಮರ್ಚಂಟ್ ಅಸೋಷಿಯೇಷನ್ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.
ರೈಲ್ವೆ ಸ್ಟೇಷನ್ ಸ್ಥಾಪನೆಗೆ ವರ್ತಕರ ಒತ್ತಾಯ ನೀರಾವರಿ ಕ್ಷೇತ್ರ ಹೆಚ್ಚಾಗಿರುವ ಮುದ್ದೇಬಿಹಾಳ ಮತಕ್ಷೇತ್ರದಲ್ಲಿನ ವಾಣಿಜ್ಯ ಚಟುವಟಿಕೆಗಳನ್ನು ವಿಸ್ತರಿಸಲು ಹಾಗೂ ಹೊರ ರಾಜ್ಯಗಳಿಂದ ಕೃಷಿ, ಜವಳಿ ಸೇರಿದಂತೆ ಹಲವು ವಸ್ತುಗಳ ಆಮದು ರಫ್ತಿಗೆ ಅನುಕೂಲವಾಗುವಂತೆ ಮುದ್ದೇಬಿಹಾಳ ಭಾಗದಲ್ಲಿ ರೈಲ್ವೆ ಸ್ಟೇಷನ್ ಸ್ಥಾಪನೆಯಾಗಬೇಕಿದೆ. ಈ ಸಂಬಂಧ ಸರ್ಕಾರದ ಗಮನ ಸೆಳೆಯುವಂತೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ರೈಲ್ವೆ ಸ್ಟೇಷನ್ ಸ್ಥಾಪನೆಗೆ ವರ್ತಕರ ಒತ್ತಾಯ ಮುದ್ದೇಬಿಹಾಳ ತಾಲೂಕು ಸಂಪೂರ್ಣ ನೀರಾವರಿ ಪ್ರದೇಶವಾಗಿದ್ದು, ಮೆಕ್ಕೆಜೋಳ, ತೊಗರಿ, ಸಜ್ಜೆ, ಜೋಳ, ಕಬ್ಬು ಬೆಳೆಯಲಾಗುತ್ತದೆ. ಯರಗಲ್ ಗ್ರಾಮದಲ್ಲಿ ಕೇವಲ 10 ಕಿ.ಮೀ ಅಂತರದಲ್ಲಿ ಸಕ್ಕರೆ ಕಾರ್ಖಾನೆ ಇರುವುದರಿಂದ ಎಲ್ಲ ಮೂಲ ಸರಕುಗಳು ಹೊರರಾಜ್ಯಗಳಿಗೆ ಹೋಗುವುದರಿಂದ ಗೂಡ್ಸ್ ರೈಲ್ವೆ ಅತೀ ಅವಶ್ಯ ಇದೆ ಎಂದು ತಿಳಿಸಿದರು.
ಮುದ್ದೇಬಿಹಾಳದಿಂದ ಆಲಮಟ್ಟಿ ಸ್ಟೇಷನ್‌ಗೆ 10 ಟನ್ ಸರಕು ಸಾಗಿಸಲು 7000ರೂ. ಖರ್ಚು ಬರುತ್ತಿದೆ. ಮುದ್ದೇಬಿಹಾಳ ತಾಲೂಕಿನ ತೊಗರಿ ತಮಿಳುನಾಡು, ಮಧ್ಯಪ್ರದೇಶ, ಗುಜರಾತ್, ರಾಜಸ್ತಾನ, ಉತ್ತರಪ್ರದೇಶ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ರಫ್ತಾಗುವ ಕಾರಣ ಮುದ್ದೇಬಿಹಾಳಕ್ಕೆ ರೈಲ್ವೆ ಸ್ಟೇಷನ್ ಸ್ಥಾಪನೆ ಮಾಡಿ ಸರಕು ಸಾಗಾಟಕ್ಕೆ ಅನುಕೂಲ ಮಾಡಿಕೊಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.