ವಿಜಯಪುರ:ಕೊರೊನಾ ಸೋಂಕಿನ ಸಮಯದಲ್ಲಿ ಜೀವರಕ್ಷಕವಾಗಿರುವ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವಿವಿಧ ಆಸ್ಪತ್ರೆಗಳ 9 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಅನುಪಮ್ ಅಗರವಾಲ್, ಎರಡನೇ ಅಲೆ ಸದ್ಯ ದೇಶವನ್ನೇ ತತ್ತರಿಸುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಇದನ್ನು ಬಂಡವಾಳ ಮಾಡಿ ದುಡ್ಡು ಗಳಿಸಲು ಹಲವು ಜನರು ಮುಂದಾಗುತ್ತಿದ್ದಾರೆ. ಇಂತಹ ಒಂದು ಪ್ರಕರಣವನ್ನು ವಿಜಯಪುರ ಜಿಲ್ಲಾ ಪೊಲೀಸರು ಬೇಧಿಸಿದ್ದಾರೆ ಎಂದಿದ್ದಾರೆ.
ಎಸ್ಪಿ ಅನುಪಮ್ ಅಗರವಾಲ್ ಸುದ್ದಿಗೋಷ್ಠಿ ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಸೋಂಕಿತರಿಗೆ ನೀಡುವ ರೆಮ್ಡೆಸಿವಿರ್ ಔಷಧವನ್ನು ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿದ ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆ ಸೇರಿ 9 ಸಿಬ್ಬಂದಿಯನ್ನು ಬಂಧಿಸುವಲ್ಲಿ ವಿಜಯಪುರ ಸಿಇಎನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಅನುಪಮ್ ಅಗರವಾಲ್ ತಿಳಿಸಿದರು.
ಇದನ್ನೂ ಓದಿ:ವಿವಿಧ ರಾಜ್ಯಗಳಿಗೆ ಕೇಂದ್ರದಿಂದ ರೆಮ್ಡಿಸಿವಿರ್ ಹಂಚಿಕೆ: ರಾಜ್ಯದ ಪಾಲು ಎಷ್ಟು ಗೊತ್ತಾ..?
ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ರೆಮ್ಡೆಸಿವರ್ ಔಷಧ ಸರಿಯಾಗಿ ನೀಡದೆ ಕಾಳಸಂತೆಯಲ್ಲಿ ಮಾರಾಟ ಮಾಡ್ತಿದ್ದ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಸಾಬ್ ಬಾಬು ಹತ್ತರಕಿಹಾಳ, ಇಮ್ತಿಯಾಜ್ ಹುಸೇನಸಾಬ್ ಮಟ್ಟಿ, ಶಿವಕುಮಾರ್ ಸಿದ್ದಗೊಂಡ ಮದರಿ, ಮೌಲಾಲಿ ರಜಾಕಸಾಬ್ ಹತ್ತರಕಾಳ್, ಸೈಯದ್ ಮೌಲಾಸಾಬ್ ಆಹೇರಿ, ಜಕಪ್ಪ ಮಲಕಾರಿ ತಡ್ಲಗಿ, ಸಂಜೀವ ನರಸಿಂಹ ಜೋಶಿ, ಯಲ್ಲಮ್ಮ ಕನ್ನಾಳ, ಸುರೇಖಾ ಗಾಯಕವಾಡ ಎಂಬುವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಂಧಿತರಿಂದ ರೆಮ್ಡೆಸಿವಿರ್ 3 ಬಾಟಲ್, ನಗದು ಸೇರಿ 7 ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈಗಾಗಲೇ ರೆಮ್ಡೆಸಿವಿರ್ ಚುಚ್ಚುಮದ್ದು ಮಾರಾಟ ಮಾಡುತ್ತಿದ್ದವರ ಮೇಲೆ ಮೂರು ಪ್ರಕರಣ ಜಿಲ್ಲೆ ಯಲ್ಲಿ ದಾಖಲಾಗಿದೆ. ಈ ಸಂಬಂಧ 10 ಜನರನ್ನು ಬಂಧಿಸಲಾಗಿದೆ. ಇಂದು ಭೇದಿಸಿದ ಪ್ರಕರಣವನ್ನು ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಎಂದು ಅನುಪಮ ಅಗರವಾಲ್ ಮಾಹಿತಿ ನೀಡಿದ್ದಾರೆ.