ಕರ್ನಾಟಕ

karnataka

ETV Bharat / state

ವಿಜಯಪುರ: ನಕಲಿ ದಾಖಲೆ ಸೃಷ್ಟಿಸಿ ಅಂಗನವಾಡಿ ಕಾರ್ಯಕರ್ತೆ ನೇಮಕ ಆರೋಪ - Recruit a Anganwadi activist by creating a forged document in Kanamadi village

ವಿಜಯಪುರ ಜಿಲ್ಲೆಯ ತಿಕೋಟಾ ವ್ಯಾಪ್ತಿಗೆ ಬರುವ ಕನಮಡಿ ಗ್ರಾಮದ ಕೊಂಡಿ ವಸತಿ ಅಂಗನವಾಡಿ ಕೇಂದ್ರಕ್ಕೆ 2013ರಲ್ಲಿ ಸರ್ಕಾರ ನೇಮಕ ಆದೇಶ ಹೊರಡಿಸಿತ್ತು. ಆದ್ರೆ ಸ್ವ ಗ್ರಾಮದ ನಿವಾಸಿಗಳ ಬಿಟ್ಟು ಬೇರೆ ಜಿಲ್ಲೆಯ ನಿವಾಸಿಯನ್ನು ಅಂಗನವಾಡಿ ಕೇಂದ್ರಕ್ಕೆ ನೇಮಕ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

anganwadi
ಅಂಗನವಾಡಿ ಕಾರ್ಯಕರ್ತೆ

By

Published : Nov 12, 2020, 1:46 PM IST

ವಿಜಯಪುರ: ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಮಹಿಳೆಯೊಬ್ಬಳಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ನಕಲಿ ದಾಖಲೆ ಸೃಷ್ಟಿಸಿ ಅಂಗನವಾಡಿ ಕಾರ್ಯಕರ್ತೆ ನೇಮಕ ಆರೋಪ

ಜಿಲ್ಲೆಯ ತಿಕೋಟಾ ವ್ಯಾಪ್ತಿಗೆ ಬರುವ ಕನಮಡಿ ಗ್ರಾಮದ ಕೊಂಡಿ ವಸತಿ ಅಂಗನವಾಡಿ ಕೇಂದ್ರಕ್ಕೆ 2013ರಲ್ಲಿ ಸರ್ಕಾರ ನೇಮಕ ಆದೇಶ ಹೊರಡಿಸಿತ್ತು. ಆದ್ರೆ, ಸ್ವ ಗ್ರಾಮದ ನಿವಾಸಿಗಳ ಬಿಟ್ಟು ಬೇರೆ ಜಿಲ್ಲೆಯ ನಿವಾಸಿ ಅಂಗನವಾಡಿ ಕೇಂದ್ರಕ್ಕೆ ನೇಮಕ ಮಾಡಲಾಗಿದೆ ಎಂದು ಆರೋಪ ಕೇಳಿ ಬರುತ್ತಿದೆ.

ಸಂಪೂರ್ಣ ದಾಖಲಾತಿ ಪರಿಶೀಲನೆಯ ಕುರಿತ ಪತ್ರ

ಮಂಜುಳಾ ಮಹಾದೇವ ಕೊಂಡಿ ಎಂಬ ಮಹಿಳೆ ಅಂಗವಾಡಿ ಶಿಕ್ಷಕಿ ಹುದ್ದೆಗೆ ಅರ್ಜಿ ಸಲ್ಲಿಸಿದರು. ಆದ್ರೆ, ಅಧಿಕಾರಿಗಳು ಮಾತ್ರ ಬೇರೆ ಜಿಲ್ಲೆಯ ನಿವಾಸಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

ಜಿಲ್ಲಾಧಿಕಾರಿಗಳ ಆದೇಶ ಪ್ರತಿ

ಇನ್ನು ಕನಮಡಿ ಗ್ರಾಮದ ಅಶ್ವಿನಿ ದೊಂಡಿ ಎಂಬ ಮಹಿಳೆ ವಿವಾಹವಾಗಿ ಬೆಳಗಾವಿ ಜಿಲ್ಲೆ ಕಕಮರಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಇವರ ನಕಲಿ ದಾಖಲೆಯನ್ನು ಸೃಷ್ಟಿಸಿರುವ ಅಧಿಕಾರಿಗಳು ಅಂಗನವಾಡಿ ಶಿಕ್ಷಕಿ ಹುದ್ದೆಗೆ ನೇಮಕ ಮಾಡಿಕೊಂಡಿದ್ದಾರೆ ಎಂದು ಮಂಜುಳಾ ಕೊಂಡಿ ಆರೋಪಿಸಿದ್ದಾರೆ.

ಮಂಜುಳ ಕೊಂಡಿ ಸಲ್ಲಿಸಿರುವ ಅರ್ಜಿ

ನೇಮಕ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿಗೆ ಕೋರ್ಟ್ ಆದೇಶಿಸಿದ್ದು, ಅಂದಿನ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್​​ ಅರ್ಜಿಗಳನ್ನ ಪರಿಶೀಲನೆ ಮಾಡಿದ್ದಾರಂತೆ. ಇತ್ತ ಮಂಜುಳಾ ನ್ಯಾಯ ನೀಡುವಂತೆ ಜಿಲ್ಲಾಧಿಕಾರಿ ಬಳಿ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಕೂಡಾ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನೇಮ‌ಕ ಮಾಡಿಕೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details