ವಿಜಯಪುರ: ನಾಳೆಯಿಂದ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೆ ಎಂಎಸ್‌ಐಎಲ್ ಮತ್ತು ವೈನ್‌ಶಾಪ್ ಮಾಲೀಕರು ಗಿರಾಕಿಗಳಿಂದ ಸಾಮಾಜಿಕ ಅಂತರ ಕಾಯಲು ಕಟ್ಟಿಗೆ ಕಟ್ಟುತ್ತಿದ್ದಾರೆ.
ವಿಜಯಪುರದಲ್ಲಿ ಎಂಎಸ್‌ಐಎಲ್ ಮದ್ಯ ಮಾರಾಟಕ್ಕೆ ತಯಾರಿ - ವಿಜಯಪುರದಲ್ಲಿ ಎಂಎಸ್‌ಐಎಲ್ ಮದ್ಯ ಮಾರಾಟಕ್ಕೆ ತಯಾರಿ
ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದ ಬೆನ್ನಲ್ಲೆ ಎಂಎಸ್‌ಐಎಲ್ ಮತ್ತು ವೈನ್‌ಶಾಪ್ ಮಾಲೀಕರು ಗಿರಾಕಿಗಳಿಂದ ಸಾಮಾಜಿಕ ಅಂತರ ಕಾಯಲು ಗುಮ್ಮಟನಗರಿಯಲ್ಲಿ ಕಟ್ಟಿಗೆ ಕಟ್ಟುತ್ತಿದ್ದಾರೆ.
ವಿಜಯಪುರದಲ್ಲಿ ಎಂಎಸ್‌ಐಎಲ್ ಮದ್ಯ ಮಾರಾಟಕ್ಕೆ ತಯಾರಿ
ಕಳೆದ 42 ದಿನಗಳಿಂದ ಕೊರೊನಾ ಭೀತಿಯಿಂದ ಬಂದ್ ಆಗಿದ್ದ ವೈನ್‌ಶಾಪ್ ಹಾಗೂ ಎಂಎಸ್‌ಐಎಲ್ ಮದ್ಯ ಮಾರಾಟಕ್ಕೆ ಸರ್ಕಾರ ನಾಳೆಯಿಂದ ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೆ ಅಂಗಡಿ ಮಾಲೀಕರು ಗಿರಾಕಿಗಳಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಪಾರ್ಸಲ್ ತೆಗೆದುಕೊಂಡು ಹೋಗುವಂತೆ ವೈನ್ ಶಾಪ್ ಮಾಲೀಕರು ಅಂಗಡಿಗಳ ಮುಂಭಾಗದಲ್ಲಿ ಕಟ್ಟಿಗೆ ಕಟ್ಟುತ್ತಿದ್ದಾರೆ. ಮದ್ಯ ಪ್ರಿಯರ ಮದ್ಯಮಾರಾಟಕ್ಕೆ ಅನುಮತಿ ಸಿಕ್ಕಿದ್ದು ಸಂತಸ ತಂದಿದೆ.
ಜಿಲ್ಲಾಡಳಿತ ಮದ್ಯದಂಗಡಿ ಮಾಲೀಕರಿಗೆ ಬರುವ ಗಿರಾಕಿಗಳಿಂದ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಪಾರ್ಸಲ್ ನೀಡುವಂತೆ ತಾಕೀತು ಮಾಡಿದ್ದಾರೆ.