ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ ​.. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಬಂಧನ - Vijayapura Central Bus Stand

ಮಾನಸಿಕ ಅಸ್ವಸ್ಥೆ ಯುವತಿಯನ್ನು ಪುಸಲಾಯಿಸಿ ಅತ್ಯಾಚಾರ-ಮೂವರು ಆರೋಪಿಗಳ ಬಂಧನ

ಆರೋಪಿಗಳು
ಆರೋಪಿಗಳು

By

Published : Jan 22, 2023, 9:09 PM IST

Updated : Jan 22, 2023, 9:31 PM IST

ಎಸ್​ಪಿ ಆನಂದಕುಮಾರ್ ಅವರು ಮಾತನಾಡಿದರು

ವಿಜಯಪುರ:ಬಸ್ ನಿಲ್ದಾಣದಲ್ಲಿ ರಾತ್ರಿ ಹೊತ್ತು ನಿಂತಿದ್ದ ಮಾನಸಿಕ ಅಸ್ವಸ್ಥ ಯುವತಿಯನ್ನು ಪುಸಲಾಯಿಸಿ ಮೂವರು ಯುವಕರು ಕರೆದುಕೊಂಡು ಹೋಗಿ ಓರ್ವ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಅಯಾಜ್ ಅಹಮ್ಮದ್ ಜಮಾದಾರ, ಉಮರ್ ಪಾರೂಕ್ ಹಾಗೂ ರಾಹಿಲ್ ಎಂದು ಗುರುತಿಸಲಾಗಿದೆ.

ರಾತ್ರಿ ನಡೆದಿದ್ದೇನು?: 'ಜನವರಿ 17 ರಂದು ಇಂಡಿ ಪಟ್ಟಣದ ನಿವಾಸಿ ಮಾನಸಿಕ‌ ಅಸ್ವಸ್ಥೆ ಯುವತಿ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್​ಗಾಗಿ ಕಾಯುತ್ತಿದ್ದಾಗ, ಮೂವರು ಯುವಕರು ರಾತ್ರಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಆ ಯುವತಿಯ ವರ್ತನೆ ನೋಡಿ ಮೂವರು ಯುವಕರು ನಿಮ್ಮ ಊರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಪುಸಲಾಯಿಸಿ ಅವರ ಬೈಕ್​ನಲ್ಲಿ ಯುವತಿಯನ್ನು ಕರೆದುಕೊಂಡು ಹೋಗಿ ನಗರದ ತರಕಾರಿ ಮಾರುಕಟ್ಟೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಓರ್ವ ಯುವಕ ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾನೆ.

ಉಳಿದ ಇಬ್ಬರು ಇದಕ್ಕೆ ಸಹಾಯ ಮಾಡಿದ್ದರು. ಈ ರೀತಿಯ ಅಸಹಾಯಕ ಯುವತಿಯ ಮೇಲೆ ಅತ್ಯಾಚಾರ ಎಸಗುವುದು ಹೇಯ ಕೃತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸರು ಕೇಂದ್ರ ಬಸ್ ನಿಲ್ದಾಣದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ಆಧರಿಸಿ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿತ್ತು. ಈ ವೇಳೆ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ' ಎಂದು ಎಸ್​ಪಿ ಆನಂದ್​ಕುಮಾರ್ ಅವರು ತಿಳಿಸಿದ್ದಾರೆ.

ಆರೋಪಿಗಳ ಹಿನ್ನೆಲೆ :ಬಂಧಿತ ಆರೋಪಿಗಳಾದ ಅಯಾಜ್ ಅಹಮ್ಮದ್ ಜಮಾದಾರ, ಉಮರ್ ಪಾರುಕ್ ಹಾಗೂ ರಾಹಿಲ್ ನಗರದಲ್ಲಿ‌ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಸ್ವಂತ ವಾಸಿಸಲು ಯಾವುದೇ ಜಾಗವಿಲ್ಲದ ಕಾರಣ ರಾತ್ರಿ ಸುತ್ತಾಡುತ್ತಿದ್ದರು. ಅಲ್ಲಿಯೇ ಚಿಂದಿ ಆಯ್ದು ಅದನ್ನು ಮಾರಿ ಜೀವನ ನಡೆಸುತ್ತಿದ್ದರು. ಜ. 17ರಂದು ಈ ಆರೋಪಿಗಳಿಗೆ ಮಾನಸಿಕ ಅಸ್ವಸ್ಥ ಯುವತಿ ಸಿಕ್ಕಾಗ ಆಕೆಯನ್ನು ಪುಸಲಾಯಿಸಿ ಓರ್ವ ಅತ್ಯಾಚಾರ ನಡೆಸಿ, ಈತನಿಗೆ ಸಹಾಯ ಮಾಡಿದ ಇಬ್ಬರು ಸೇರಿ ಮೂವರು ಈಗ ಕಂಬಿ ಎಣಿಸುತ್ತಿದ್ದಾರೆ.‌

ಮಹಿಳೆಯೊಂದಿಗೆ ರೆಡ್​ ಹ್ಯಾಂಡ್​ಆಗಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಕೊಂದ ಸಂಬಂಧಿಕರು:ಮತ್ತೊಂದೆಡೆಮಹಿಳೆಯೊಬ್ಬರ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಆಕೆಯ ಸಂಬಂಧಿಕರೇ ಹತ್ಯೆ ಮಾಡಿರುವ ಘಟನೆ ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನ ಹತ್ತರಕಿಹಾಳ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ಹತ್ತರಕಿಹಾಳ ಗ್ರಾಮದ ಸಂಗಪ್ಪ ಭೀಮಪ್ಪ ಹೂಗಾರ (28) ಎಂದು ಗುರುತಿಸಲಾಗಿದೆ. ಜನವರಿ 19ರಂದು ಸಂಗಪ್ಪ ತನ್ನ ಮನೆಯಲ್ಲಿ ವಿವಾಹಿತ ಮಹಿಳೆ ಜತೆ ಇರುವಾಗ ಸಂಬಂಧಿಕರ ಕೈಗೆ ಸಿಕ್ಕಿ‌ಹಾಕಿಕೊಂಡಿದ್ದಾನೆ. ಇದರಿಂದ ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಸಂಗಪ್ಪನಿಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಎಫ್​ಐಆರ್​ ದಾಖಲಾಗಿದೆ.

ಆರೋಪಿಗಳು ರೆಡ್​ಹ್ಯಾಂಡ್ ಆಗಿ ಸೆರೆ :ಹತ್ಯೆಯಾದ ಸಂಗಪ್ಪ ಈಗಾಗಲೇ ಮದುವೆಯಾಗಿದ್ದನು. ಆದರೂ ಇದೇ ಗ್ರಾಮದ ಮಹಿಳೆ ಜತೆ ವಿವಾಹೇತರ ಸಂಬಂಧ ಹೊಂದಿದ್ದ.‌ ಜನವರಿ 19 ರಂದು ಸಂಗಪ್ಪ ಮಹಿಳೆಯ ಜತೆ ತನ್ನ ಮನೆಯಲ್ಲಿದ್ದಾಗ ಈ ವಿಷಯ ಮಹಿಳೆಯ ಸಂಬಂಧಿಕರಿಗೆ ಗೊತ್ತಾಗಿದ್ದು, ಇಬ್ಬರೂ ರೆಡ್​ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಇದರಿಂದ ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಸಂಗಪ್ಪನಿಗೆ ಬಡಿಗೆಯಲ್ಲಿ ಹಲ್ಲೆ ಮಾಡಿದ್ದಾರೆ. ನಂತರ ರಾಜಿ ಸಂಧಾನ ಮಾಡಲು ಬೈಕ್​ನಲ್ಲಿ ದೇಗಿನಾಳ ಗ್ರಾಮದ ಹೊಲಕ್ಕೆ ಆತನನ್ನು‌ ಕರೆದುಕೊಂಡು ಬಂದಿದ್ದಾರೆ. ಅಲ್ಲಿ ಸಂಗಪ್ಪನಿಗೆ ಕೈ ಕಾಲು‌ ಕಟ್ಟಿ ಹಾಕಿ ಮನಬಂದಂತೆ ಮತ್ತೆ ಥಳಿಸಿದ್ದಾರೆ. ಇದರಿಂದ ಸಂಗಪ್ಪ ಗಂಭೀರ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದು, ಅದಾಗಲೇ ಸಂಗಪ್ಪ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್​ ವರದಿಯಲ್ಲಿದೆ.

ಓದಿ :ವಿವಾಹೇತರ ಸಂಬಂಧ : ಮಹಿಳೆಯೊಂದಿಗೆ ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಹೊಡೆದು‌ ಕೊಂದ ಮಹಿಳೆಯ ಸಂಬಂಧಿಕರು

Last Updated : Jan 22, 2023, 9:31 PM IST

ABOUT THE AUTHOR

...view details