ವಿಜಯಪುರ:ಸಂಸದ ರಮೇಶ್ ಜಿಗಜಿಣಗಿ ಅವರಿದ್ದ ಸರ್ಕಾರಿ ಕಾರು ವಿಜಯಪುರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸಿಗ್ನಲ್ ಜಂಪ್ ಮಾಡಿದ್ದು, ನಿಯಮ ಉಲ್ಲಂಘನೆಯಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಸಂಚಾರಿ ನಿಯಮ ಉಲ್ಲಂಘಿಸಿದ್ರಾ ಸಂಸದ ರಮೇಶ್ ಜಿಗಜಿಣಗಿ? ಇಂದು ಗಾಂಧಿ ಜಯಂತಿ ಹಿನ್ನೆಲೆ ಮಾಲಾರ್ಪಣೆ ಮಾಡಿ ತೆರಳುತ್ತಿದ್ದ ರಮೇಶ್ ಜಿಗಜಿಣಗಿ ಅವರ ಸರ್ಕಾರಿ ಕಾರು ಇನ್ನೂ 30 ಸೆಕೆಂಡ್ ರೆಡ್ ಸಿಗ್ನಲ್ ಇದ್ದಾಗಲೇ ರಸ್ತೆ ದಾಟಿದೆ ಎನ್ನಲಾಗಿದೆ. ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಂಸದರೇ ನಿಮಯ ಉಲ್ಲಂಘಿಸಿದ್ರೆ ಹೇಗೆ? ಸರ್ಕಾರಿ ವಾಹನ ಚಾಲಕರೇ ನಿಮಗೆ ದಂಡ ಹಾಕೋರ್ಯಾರು? ಸರ್ಕಾರಿ ವಾಹನ ಚಾಲಕರಿಗೆ ಹಾಗೂ ಸಂಸದರಿಗೆ ಟ್ರಾಫಿಕ್ ಸಿಗ್ನಲ್ ಸಂಬಂಧವಿಲ್ಲವೇ? ವಿಜಯಪುರದ ಪೊಲೀಸರೇ ಇವರಿಗೂ ದಂಡ ಹಾಕೋದಿಲ್ಲವೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ಇತ್ತೀಚೆಗಷ್ಟೆ ಕೇಂದ್ರ ಸರ್ಕಾರ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ರೆ ಭಾರೀ ದಂಡ ನಿಗದಿ ಮಾಡಿತ್ತು. ಇದೀಗ ಸಂಸದ ರಮೇಶ್ ಜಿಗಜಿಣಗಿ ಅವರಿಂದ ನಿಯಮ ಉಲ್ಲಂಘನೆಯಾಗಿದೆ ಎನ್ನಲಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.