ವಿಜಯಪುರ: ಮಹೇಶ ಕುಮಟಳ್ಳಿಗೆ ಟಿಕೆಟ್ ಸಿಗದಿದ್ದಿದ್ದರೆ ತಾವು ಗೋಕಾಕ್ ಕ್ಷೇತ್ರದಿಂದ ಸ್ಪರ್ಧೇ ಮಾಡಲ್ಲ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದೇ ಇರೋದಕ್ಕೆ ನನಗೆ ನಿರಾಶೆ ಇಲ್ಲ, ನಾನು ಇದ್ದ ಸಚಿವ ಸ್ಥಾನ ಬಿಟ್ಟು ಬಿಜೆಪಿಗೆ ಬಂದಿದ್ದೇನೆ ಬಿಜೆಪಿ ತತ್ವ ಸಿದ್ದಾಂತ ನಂಬಿ ಪಕ್ಷಕ್ಕೆ ಸೇರಿದ್ದೇನೆ ಎಂದರು.
ಬೆಳಗಾವಿಯಲ್ಲಿ ಈ ಬಾರಿ ಎಷ್ಟು ಸ್ಥಾನ ಬಿಜೆಪಿ ಗೆಲ್ಲಬಹುದು ಎಂಬ ವಿಚಾರವಾಗಿ ಮಾತನಾಡಿದ ಅವರು 13 ಸ್ಥಾನ ಬಿಜೆಪಿ ಗೆಲ್ಲಲಿದ್ದು, ಹೆಚ್ಚು ಗೆಲ್ಲೋಕೆ ಪ್ರಯತ್ನಿಸಿತ್ತೇವೆ ಎಂದರು. ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದವರ ಅಸಮಾಧಾನ ಗೊಂಡಿದ್ದು, ಮತ್ತೆ ಕಾಂಗ್ರೆಸ್ಗೆ ಸೇರುತ್ತಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಮುಳುಗುವ ಹಡಗು, ಕಾಂಗ್ರೆಸ್ ಹಡಗು ಮುಳುಗುತ್ತಿದೆ. ಈ ವೇಳೆ, ಕಾಂಗ್ರೆಸ್ಗೆ ಹೋಗೋದು ಸರಿ ಅಲ್ಲ ಎಂದ ಅವರು, ಬಿಜೆಪಿ ಬಿಡುವ ಮೂರ್ಖತನ ಯಾರು ಮಾಡಬಾರದು ಎಂದು ಹೇಳಿದರು. ಇನ್ನು ನಾರಾಯಣಗೌಡ ಕಾಂಗ್ರೆಸ್ಗೆ ಸೆರಲಿದ್ದಾರೆ ಎಂಬ ಪ್ರಶ್ನೆಗೆ ಅವರು ಕಾಂಗ್ರೆಸ್ಗೆ ಹೋಗ್ತಾರೆ ಅನ್ನೋದು ನನಗೆ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡೆ, ನಾರಾಯಣಗೌಡರ ಜೊತೆ ಮಾತನಾಡುವೆ ಎಂದರು.
ಬಳಿಕ ಸೋಮಣ್ಣ ಕಾಂಗ್ರೆಸ್ ಸೇರುವ ವಿಚಾರವಾಗಿ ಮಾತನಾಡಿದ ಸಚಿವ ಸಿ.ಸಿ ಪಾಟೀಲ, ಸೋಮಣ್ಣ ನನಗೆ ಅತ್ಯಂತ ಆತ್ಮೀಯರು. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರೋದಿಲ್ಲ, ನಾನು ಅವರೊಂದಿಗೆ ಮಾತಾಡಿದ್ದೇನೆ ಎಂದರು. ಸಂಸದೆ ಸುಮಲತಾ ಬಿಜೆಪಿ ಸೇರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರು ಬಿಜೆಪಿ ಸೇರ್ತಾರೆ ಎಂಬ ಸುದ್ದಿ ಇದೆ. ನನಗೆ ನಿಖರವಾಗಿ ಗೊತ್ತಿಲ್ಲ ಎಂದರು. ಬಳಿಕ ವಿಜಯ ಸಂಕಲ್ಪ ಯಾತ್ರೆ ವಿಚಾರವಾಗಿ ಮಾತನಾಡಿದ ರಮೇಶ್ ಜಾರಕಿಹೊಳಿ, ರಾಜ್ಯದ ನಾಲ್ಕು ದಿಕ್ಕಿನಿಂದ ವಿಜಯ ಸಂಕಲ್ಪ ಯಾತ್ರೆ ಶುರುವಾಗಿದೆ.