ವಿಜಯಪುರ: ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತೆಯ ಅಜ್ಜಿ ನಿವಾಸಕ್ಕೆ ಬೆಂಗಳೂರಿನ ಸಿ.ಸಿ.ಬಿ ಪೊಲೀಸರು ನೋಟಿಸ್ ಅಂಟಿಸಿ ಹೋಗಿರುವ ಘಟನೆ ಜಿಲ್ಲೆಯ ನಿಡಗುಂದಿಯಲ್ಲಿ ನಡೆದಿದೆ.
ಸಿಡಿ ಪ್ರಕರಣ: ಯುವತಿ ಅಜ್ಜಿ ಮನೆಗೆ ನೋಟಿಸ್ ಅಂಟಿಸಿದ ಸಿಸಿಬಿ - ವಿಜಯಪುರ ಸುದ್ದಿ,
12:00 March 25
ಸಿಡಿ ಪ್ರಕರಣ ಕುರಿತು ವಿಚಾರಣೆಗೆ ಹಾಜರಾಗುವಂತೆ ಯುವತಿ ಅಜ್ಜಿ ಮನೆಗೆ ತೆರಳಿ ಸಿಸಿಬಿ ನೋಟಿಸ್ ನೀಡಿದೆ.
ಮನೆಯ ಕಂಪೌಂಡ್ ಗೋಡೆಗೆ ಸಿಸಿಬಿ ಪೊಲೀಸರು ನೋಟಿಸ್ ಅಂಟಿಸಿದ್ದಾರೆ. ಮಾರ್ಚ್ 29ರಂದು ಸಿಸಿಬಿ ಕಚೇರಿಯ ಮಡಿವಾಳ ಇಂಟ್ರಾಗೇಷನ್ ಸೆಂಟರ್ಗೆ ಬಂದು ಹಾಜರಾಗುವಂತೆ ಯುವತಿಯ ತಂದೆ ಮತ್ತು ಸಹೋದರನ ಹೆಸರಿಗೆ ಸಿಸಿಬಿ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ಆರ್.ಟಿ ನಗರ ಠಾಣೆಯಲ್ಲಿನ ಪ್ರಕರಣದ ಕುರಿತು ಹಾಜರಾಗಲು ಯುವತಿ ತಂದೆ ಮತ್ತು ಸಹೋದರಿನಿಗೆ ನೋಟಿಸ್ ಜಾರಿಯಾಗಿದೆ. ಪ್ರಕರಣದಲ್ಲಿ ತಮ್ಮ ಹೇಳಿಕೆ ಅಗತ್ಯವಾಗಿದೆ ಎಂದು ಯುವತಿಯ ತಂದೆ ಮತ್ತು ಸಹೋದರನಿಗೆ ಸಿಸಿಬಿ ಪೊಲೀಸರು ನೋಟಿಸ್ನಲ್ಲಿ ನಮೂದು ಮಾಡಿದೆ.
ಕಳೆದ ರಾತ್ರಿ ಸಿಸಿಬಿ ಪೊಲೀಸರು ನೋಟಿಸ್ ಅಂಟಿಸಿರಬಹುದು ಎಂದು ಹೇಳಲಾಗುತ್ತಿದೆ. ಸಿಡಿ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ನಿಡಗುಂದಿಯ ಸಂತ್ರಸ್ತೆ ಅಜ್ಜಿ ಮನೆಗೆ ಬೀಗ ಜಡಿಯಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಕಂಪೌಂಡ್ ಗೋಡೆಗೆ ಸಿಸಿಬಿ ಪೊಲೀಸರು ನೋಟಿಸ್ ಅಂಟಿಸಿ ಹೋಗಿದ್ದಾರೆ.
ಈ ಹಿಂದೆ ಮಾರ್ಚ್ 14ರಂದು ಸಹ ಬೆಂಗಳೂರಿನ ಕಬ್ಬನಪಾರ್ಕ್ ಠಾಣೆ ಪೊಲೀಸರು ಸಂತ್ರಸ್ತೆ ಯುವತಿಗೆ ವಿಚಾರಣೆಗೆ ಹಾಜರಾಗುವಂತೆ ಇದೇ ಮನೆಗೆ ನೊಟೀಸ್ ಅಂಟಿಸಿದ್ದರು. ಈಗ ಎರಡನೇ ಬಾರಿಗೆ ಸಂತ್ರಸ್ತೆಯ ಅಜ್ಜಿ ಮನೆಗೆ ನೋಟಿಸ್ ಅಂಟಿಸಿದ ಅಧಿಕಾರಿಗಳು ಆಕೆಯ ತಂದೆ ಮತ್ತು ಸಹೋದರನಿಗೆ ಪೊಲೀಸ್ ಠಾಣೆಗೆ ಹಾಜರಾಗುವಂತೆ ಉಲ್ಲೇಖಿಸಿದ್ದಾರೆ.