ವಿಜಯಪುರ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆ ಕಳ್ಳಕವಟಗಿ ಗ್ರಾಮದ ಸಂಗಮನಾಥ ದೇವಾಲಯ ನೀರಿನಿಂದ ಆವೃತವಾಗಿದೆ.
ವಿಜಯಪುರ: ಭಾರಿ ಮಳೆಯಿಂದ ಸಂಗಮನಾಥ ದೇವಾಲಯದೊಳಗೆ ನುಗ್ಗಿದ ನೀರು - Somnatha Temple
ಭಾನುವಾರದ ಸಂಜೆಯಿಂದಲೇ ಬಾಬಾನಗರ, ಬಿಜ್ಜರಗಿ ಗ್ರಾಮಗಳಲ್ಲಿ ಮಳೆ ಆರಂಭವಾಗಿ ಇಡೀ ರಾತ್ರಿ ಸುರಿದ ಪರಿಣಾಮ ಸುತ್ತಲಿನ ಹಳ್ಳ ತುಂಬಿ ಹರಿಯುತ್ತಿದೆ. ಹೀಗಾಗಿ ಸಂಗಮನಾಥ ದೇವಾಲಯಕ್ಕೆ ನೀರು ನುಗ್ಗಿದ್ದು, ಭಕ್ತರು ದೇವಾಲಯದಿಂದ ದೂರ ಉಳಿಯುವಂತಾಗಿದೆ.
ನೀರಿನಿಂದ ಆವೃತವಾಗಿರುವ ಸಂಗಮನಾಥ ದೇವಾಲಯ
ಭಾನುವಾರದ ಸಂಜೆಯಿಂದಲೇ ಬಾಬಾನಗರ, ಬಿಜ್ಜರಗಿ ಗ್ರಾಮಗಳಲ್ಲಿ ಮಳೆ ಆರಂಭವಾಗಿ ಇಡೀ ರಾತ್ರಿ ಸುರಿದ ಪರಿಣಾಮ ಹಳ್ಳ ತುಂಬಿ ಹರಿಯುತ್ತಿದೆ. ಹೀಗಾಗಿ ಸಂಗಮನಾಥ ದೇವಾಲಯಕ್ಕೆ ನೀರು ನುಗ್ಗಿದ್ದು, ಭಕ್ತರು ದೇವಾಲಯದಿಂದ ದೂರ ಉಳಿಯುವಂತಾಗಿದೆ.
ಇನ್ನು ಕಳ್ಳಕವಟಗಿಯ ಹಳ್ಳ ತುಂಬಿ ಹರಿಯುತ್ತಿರುವ ಕಾರಣ ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತಡೆಯುಂಟಾಗಿದ್ದು, ಕೆಲವರು ಜೀವದ ಹಂಗು ತೊರೆದು ಅದೇ ನೀರಿನ ಮೇಲೆ ವಾಹನ ಚಲಾಯಿಸುತ್ತಿದ್ದಾರೆ.