ವಿಜಯಪುರ: ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣದಿಂದ ಕೂಡಿದ್ದ ಗುಮ್ಮಟ ನಗರಿಯಲ್ಲೀಗ ಉತ್ತಮವಾಗಿ ಮಳೆಯಾಗುತ್ತಿದ್ದು, ನಗರದ ನಿವಾಸಿಗಳಲ್ಲಿ ಸಂತಸ ಮೂಡಿಸಿದೆ.
ಗುಮ್ಮಟ ನಗರಿಗೆ ತಂಪೆರೆದ ವರುಣ: ರೈತರ ಮೊಗದಲ್ಲಿ ಮಂದಹಾಸ - vijaypur rain news
ನಗರದ ಸ್ಟೇಷನ್ ರಸ್ತೆ, ಬಡೆ ಕಮಾನ ರಸ್ತೆ, ಗಣೇಶ ನಗರ, ಗೋಪಾಲಪುರ ಗಲ್ಲಿ ಸೇರಿದಂತೆ ನಗರದ ಬಹುತೇಕ ಕಡೆಯಲ್ಲಿ ತುಂತುರು ಮಳೆ ಆರಂಭವಾಗಿದ್ದು, ರಸ್ತಯಲ್ಲಿ ಓಡಾಡುತ್ತಿದ್ದ ಜನರು ರಸ್ತೆ ಬದಿಯಲ್ಲಿ ಆಸರೆ ಪಡೆದುಕೊಳ್ಳುತ್ತಿದ್ದಾರೆ.
ಗುಮ್ಮಟನಗರಿಗೆ ತಂಪೆರೆದ ವರುಣ
ನಗರದ ಸ್ಟೇಷನ್ ರಸ್ತೆ, ಬಡೆ ಕಮಾನ ರಸ್ತೆ, ಗಣೇಶ ನಗರ, ಗೋಪಾಲಪುರ ಗಲ್ಲಿ ಸೇರಿದಂತೆ ನಗರ ಬಹುತೇಕ ಕಡೆಯಲ್ಲಿ ತುಂತುರು ಮಳೆ ಆರಂಭವಾಗಿದ್ದು, ರಸ್ತಯಲ್ಲಿ ಓಡಾಡುತ್ತಿದ್ದ ಜನರು ರಸ್ತೆ ಬದಿಯಲ್ಲಿ ಆಸರೆ ಪಡೆದುಕೊಳ್ಳುತ್ತಿದ್ದಾರೆ.
ಬಿತ್ತನೆ ಕಾರ್ಯ ಮುಗಿಸಿದ ರೈತರು ವರುಣನ ಬರುವಿಕೆಗಾಗಿ ಎದುರು ನೋಡುತ್ತಿದ್ದರು. ಇದೀಗ ಬಂದಿರುವ ಮಳೆಯಿಂದ ರೈತ ಸಮುದಾಯ ಹರ್ಷ ವ್ಯಕ್ತಪಡಿಸುತ್ತಿದೆ.