ಕರ್ನಾಟಕ

karnataka

ETV Bharat / state

ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆಗೆ ಡೌನಿ, ಕೊಳೆ, ಬೂದಿ ರೋಗ: ಆತಂಕದಲ್ಲಿ ಬೆಳೆಗಾರ - Rain in Vijayapur

ಹದಗೆಟ್ಟ ಹವಾಮಾನ, ಮಳೆ - ಮೋಡ ಮುಸುಕಿದ ವಾತಾವರಣದಿಂದ ದ್ರಾಕ್ಷಿ ಬೆಳೆಗೆ ಭಯಾನಕ ಡೌನಿ ರೋಗ ತಗಲುವ ಸಾಧ್ಯತೆಯಿದೆ. ಜತೆಗೆ ಕೊಳೆ ಹಾಗೂ ಬೂದಿ ರೋಗ ಹರಡುವ ಭೀತಿ ದ್ರಾಕ್ಷಿ ಬೆಳೆಗಾರರನ್ನು ( grape farmers)ಚಿಂತೆಗೀಡು ಮಾಡಿದೆ.

vijayapur
ದ್ರಾಕ್ಷಿ ಬೆಳೆ

By

Published : Nov 20, 2021, 10:10 AM IST

Updated : Nov 20, 2021, 11:16 AM IST

ವಿಜಯಪುರ:ಅಕಾಲಿಕ ಮಳೆಯಿಂದಾಗಿ 'ದ್ರಾಕ್ಷಿ ಕಣಜ' ಎನ್ನುವ ಅನ್ವರ್ಥ ನಾಮ ಹೊಂದಿರುವ ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು(grape farmers) ಕಂಗಾಲಾಗಿದ್ದಾರೆ.‌

ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆಗೆ ಡೌನಿ, ಕೊಳೆ, ಬೂದಿ ರೋಗ: ಆತಂಕದಲ್ಲಿ ಬೆಳೆಗಾರ

ಹದಗೆಟ್ಟ ಹವಾಮಾನ, ಮಳೆ - ಮೋಡ ಮುಸುಕಿದ ವಾತಾವರಣದಿಂದ ದ್ರಾಕ್ಷಿ ಬೆಳೆಗೆ ಭಯಾನಕ ಡೌನಿ ರೋಗ ತಗಲುವ ಸಾಧ್ಯತೆಯಿದೆ. ಜತೆಗೆ ಕೊಳೆ ಹಾಗೂ ಬೂದಿ ರೋಗ ಹರಡುವ ಭೀತಿ ದ್ರಾಕ್ಷಿ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ಈಗಾಗಲೇ ದ್ರಾಕ್ಷಿ ಬಳ್ಳಿಯಿಂದ ಕಾಯಿಗಳು ಉದುರುತ್ತಿರುತ್ತಿವೆ. ಇದರಿಂದ ಬೆಳೆದು ನಿಂತ ದ್ರಾಕ್ಷಿ ಕತ್ತರಿಸಿ ಬೀಳುವ ಹಂತ ತಲುಪಿದೆ.‌ ಜಿಲ್ಲೆಯಲ್ಲಿ 16,600 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗಿದೆ. ವಿಜಯಪುರ, ಬಬಲೇಶ್ವರ, ತಿಕೋಟಾ ತಾಲೂಕುಗಳಲ್ಲಿ ಪ್ರಮುಖ ಬೆಳೆಯಾಗಿ ದ್ರಾಕ್ಷಿ ಬೆಳೆಯನ್ನು ಬೆಳೆಯಲಾಗುತ್ತಿದೆ.

ಡೌನಿ ರೋಗ ತಗುಲುವ ಆತಂಕದಲ್ಲಿ ಬೆಳೆಗಾರರು:

ಡೌನಿ ರೋಗ ಬಂದರೆ ದ್ರಾಕ್ಷಿ ಬೆಳೆ ಸಂಪೂರ್ಣ ನಾಶವಾಗಲಿದೆ. ಪ್ರತಿ ವರ್ಷ ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆ ರೈತರನ್ನು ಕೈ ಹಿಡಿಯುತ್ತಿಲ್ಲ. ಡೌನಿ ರೋಗ ತಗುಲಿದರೆ ಅದನ್ನು ನಿಯಂತ್ರಣ ಮಾಡುವದು ಕಷ್ಟ - ಸಾಧ್ಯವಾಗಲಿದೆ.‌ ಹತ್ತಾರು ಸಾವಿರ ರೂ. ಖರ್ಚು ಮಾಡಿದರೂ ಡೌನಿ ನಿಯಂತ್ರಣಕ್ಕೆ ಬರೋದು ಅಷ್ಟು ಸುಲಭವಲ್ಲ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರ ಸೋಮನಾಥ ಬಾಗಲಕೋಟ.

ಇನ್ನು ದ್ರಾಕ್ಷಿ ಗೊಂಚಲಿನಲ್ಲಿ ಮಳೆ ನೀರು ನಿಂತರೆ ಕೊಳೆ ರೋಗ ಬರುವ ಸಾಧ್ಯತೆಯಿದೆ. ಸದ್ಯ ಹವಾಮಾನ ವರದಿ ಆಧರಿಸಿ ನೋಡಿದರೆ ಇನ್ನೂ ಮೂರು ದಿನ ಮಂಜು ಕವಿದ ವಾತಾವರಣ ಇರಲಿದ್ದು, ದ್ರಾಕ್ಷಿ ಕಟಾವು ಮಾಡಲು ಆಗದೇ ಬೆಳೆಗಾರ ಆತಂಕದಲ್ಲಿದ್ದಾನೆ.

ವಿದೇಶಿ ರಫ್ತು ಅನುಮಾನ:

ಪ್ರತಿ ವರ್ಷ ದ್ರಾಕ್ಷಿ ಬೆಳೆದ ರೈತರು ಶೀತಲಗೃಹ ಮೂಲಕ ಅದನ್ನು ರಕ್ಷಿಸಿ ವಿದೇಶಗಳಿಗೆ ರಫ್ತು ಮಾಡುತ್ತಿದ್ದರು. ಆದರೆ, ಈ ಬಾರಿ ಅಕಾಲಿಕ ಮಳೆ, ಮೂಡ ಕವಿದ ವಾತಾವರಣ, ಮಂಜಿನ‌ ಹನಿಯಿಂದ ದ್ರಾಕ್ಷಿಗೆ ಡೌನಿ, ಕೊಳೆ ರೋಗ ತಗುಲಿದ ಕಾರಣ ನಿರೀಕ್ಷೆ ಮಟ್ಟದಲ್ಲಿ ದ್ರಾಕ್ಷಿ ಬೆಳೆದ ಕೈಗೆ ತಲುಪುವುದು ಅನುಮಾನ. ಹಾಗಾಗಿ ವಿದೇಶಕ್ಕೆ ರಫ್ತು ಅಸಾಧ್ಯವಾಗಿದೆ.

ಇದನ್ನೂ ಓದಿ:ಬೆಳೆ ಹಾನಿ ಕುರಿತ ಜಂಟಿ ಸಮೀಕ್ಷೆಗೆ ಚಾಮರಾಜನಗರ ಡಿಸಿ ಆದೇಶ: ತುರ್ತು ಸ್ಪಂದನೆಗೆ ಸೂಚನೆ

Last Updated : Nov 20, 2021, 11:16 AM IST

ABOUT THE AUTHOR

...view details