ಕರ್ನಾಟಕ

karnataka

ETV Bharat / state

ರಾಹುಲ್ ಗಾಂಧಿಗೆ ಪರಿಪಕ್ವತೆ ಇಲ್ಲ,ಮೂರ್ಖ: ಬಸನಗೌಡ ಪಾಟೀಲ್​ ಯತ್ನಾಳ್​ - ರಾಹುಲ್ ಗಾಂಧಿಗೆ ಪರಿಪಕ್ವತೆ ಇಲ್ಲ

ರಾಹುಲ್ ಗಾಂಧಿಗೆ ಪರಿಪಕ್ವತೆ ಇಲ್ಲ, ಪುಲ್ವಾಮಾ ದಾಳಿ ಬಗ್ಗೆ ಈ ರೀತಿ ಮತನಾಡುವ ಮೂಲಕ ನಮ್ಮ ದೇಶದ ಸೈನಿಕರಿಗೆ ಅಪಮಾನ ಮಾಡಿದ್ದಾರೆ ಎಂದು ವಿಜಯಪುರ ‌ನಗರದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಾಗ್ದಾಳಿ ನಡೆಸಿದರು.

Basana Gowdha Patil Yatnal
ಬಸನಗೌಡ ಪಾಟೀಲ್​ ಯತ್ನಾಳ್ ಸುದ್ದಿಗೋಷ್ಠಿ

By

Published : Feb 14, 2020, 9:51 PM IST

ವಿಜಯಪುರ: ರಾಹುಲ್ ಗಾಂಧಿಗೆ ಪರಿಪಕ್ವತೆ ಇಲ್ಲ, ಪುಲ್ವಾಮಾ ದಾಳಿ ಬಗ್ಗೆ ಈ ರೀತಿ ಮತನಾಡುವ ಮೂಲಕ ನಮ್ಮ ದೇಶದ ಸೈನಿಕರಿಗೆ ಅಪಮಾನ ಮಾಡಿದ್ದಾರೆ ಎಂದು ವಿಜಯಪುರ ‌ನಗರದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಾಗ್ದಾಳಿ ನಡೆಸಿದರು.

ಬಸನಗೌಡ ಪಾಟೀಲ್​ ಯತ್ನಾಳ್ ಸುದ್ದಿಗೋಷ್ಠಿ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ‌ ಯತ್ನಾಳ, ಪುಲ್ವಾಮಾ ದಾಳಿ ಬಗ್ಗೆ ರಾಹುಲ್ ಗಾಂಧಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಇವತ್ತು ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನೆಲಕಚ್ಚುತ್ತಿದೆ. ಪುಲ್ವಾಮಾ ದಾಳಿಯಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಮೊದಲೇ ಹೇಳಿದ ಹಾಗೆ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದಲ್ಲಿ ಅಲ್ಲ, ಇಡೀ ರಾಜಕೀಯ ವ್ಯವಸ್ಥೆಯಲ್ಲಿಯೇ ಜೋಕರ್ ಆಗಿದ್ದಾರೆ. ಅದಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಯತ್ನಾಳ್​ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದರು.

ದೇಶದ ಸುರಕ್ಷಿತೆ ಬಗ್ಗೆ ಮೋದಿ ಒತ್ತು ನೀಡಿದ್ದಾರೆ. ‌ರಾಹುಲ್ ಗಾಂಧಿ ಈ ಕುರಿತು ಕ್ಷಮೆ ಕೇಳಬೇಕು. ರಾಹುಲ್ ಗಾಂಧಿ ಒಬ್ಬ ಮೂರ್ಖ, ದೇಶದ ಸೈನ್ಯ ,ಪೊಲೀಸ್ ಹಾಗೂ ಆತಂರಿಕ ವಿಚಾರದ ಕುರಿತು ಮಾತನಾಡಬೇಕು. ದೇಶದ ವಿಚಾರ ಬಂದಾಗ ಒಗಟ್ಟಿನಿಂದ ಮಾತನಾಡೋದು ಗೊತ್ತಿಲ್ಲ, ಎಲ್ಲರು‌ ಪಾಕಿಸ್ತಾನದ ಏಜೆಂಟ್ ತರ ಮಾತನಾಡುತ್ತಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಈಗ ಪಾಕಿಸ್ತಾನ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವಾಗಿದೆ. ಪ್ರತಿ ಹೇಳಿಕೆಗಳು ಪಾಕಿಸ್ತಾನದ ವಕ್ತಾರರ ಹಾಗೆಯೇ ಹೇಳುತ್ತಾರೆ. ಇಮ್ರಾನ್‌ಖಾನ್ ಬಿಟ್ಟರೆ ರಾಹುಲ್ ಗಾಂಧಿ ದೇಶ ವಿರೋಧಿ ಹೇಳಿಕೆ ನೀಡುತ್ತಾರೆ ಎಂದರು.

ಕಮ್ಯುನಿಸ್ಟ್‌ರು ನಮ್ಮ ದೇಶಕ್ಕೆ ಕ್ಯಾನ್ಸರ್ ಪೀಡಿತರು ಇದ್ದ ಹಾಗೆ. ಅವರು ಧರ್ಮ, ಸಂಸ್ಕ್ರತಿ ಹಾಗೂ ರಾಷ್ಟ್ರೀಯತೆಯ ಬಗ್ಗೆ ಕಮ್ಮಿ ನಿಷ್ಠೆ ಹೊಂದಿದ್ದಾರೆ. ಚೀನಾ ಬಿಟ್ಟರೆ ಯಾವುದೇ ರಾಷ್ಟ್ರದಲ್ಲಿ ಕಮ್ಯುನಿಸ್ಟ್​ರು ಇಲ್ಲ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯುನಿಸ್ಟ್​ರು ಭಾಗಿಯಾಗಿಲ್ಲ ಸಮಾಧಾನ ಹೊರಹಾಕಿದರು.

ಶಾಲೆಯೊಂದರಲ್ಲಿ ದೇಶ‌ ವಿರೋಧಿ ( ಮೋದಿ ವಿರೋಧಿ) ನಾಟಕ ಪ್ರದರ್ಶನ ಮಾಡಿದ ಕುರಿತು ಸಿದ್ದರಾಮಯ್ಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ್​, ಸಿದ್ದರಾಮಯ್ಯನವರಿಗೆ ದೇಶದ ಹಿತಾಸಕ್ತಿ ಬೇಕಿಲ್ಲ, ಕೇವಲ ಮುಸ್ಲಿಂ ಮತಗಳು ಬೇಕಾಗಿವೆ. ದೇಶ ವಿರೋಧಿ ಹೇಳಿಕೆ ನೀಡುವುದರಿಂದ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಶಾಸಕ ಯತ್ನಾಳ ಹರಿಹಾಯ್ದರು.

ABOUT THE AUTHOR

...view details