ಕರ್ನಾಟಕ

karnataka

ETV Bharat / state

ಹೈಕೋರ್ಟ್ ಆದೇಶ ರದ್ದಾಗದ ಕಾರಣ ಹಿಜಾಬ್ ಧರಿಸಲು ಅವಕಾಶವಿಲ್ಲ: ಶಾಸಕ ರಘುಪತಿ ಭಟ್​

ಹಿಜಾಬ್​ ವಿಚಾರವಾಗಿ ಸುಪ್ರೀಂಕೋರ್ಟ್​ನಲ್ಲಿ ಇಬ್ಬರು ಜಡ್ಜ್​​ಗಳಿದ್ದ ಪೀಠವು ವಿಭಿನ್ನ ಆದೇಶ ನೀಡಿದ್ದು, ನ್ಯಾಯಮೂರ್ತಿಗಳ ಆದೇಶ ನಾವು ಪ್ರಶ್ನೆ ಮಾಡಲಾಗಲ್ಲ ಎಂದು ಶಾಸಕ ರಘುಪತಿ ಭಟ್​ ಹೇಳಿದರು.

Kn_vjp_0
ಶಾಸಕ ರಘುಪತಿ ಭಟ್​

By

Published : Oct 13, 2022, 4:24 PM IST

Updated : Oct 13, 2022, 5:44 PM IST

ವಿಜಯಪುರ: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಹಿಜಾಬ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಜೆಐಗೆ ವರ್ಗಾವಣೆ ಮಾಡಿದ ವಿಚಾರವಾಗಿ ಉಡುಪಿ ಶಾಸಕ ರಘುಪತಿ ಭಟ್​​ ಪ್ರತಿಕ್ರಿಯೆ ನೀಡಿದ್ದು, ಸುಪ್ರೀಂ ಕೋರ್ಟ್​ನಲ್ಲಿ ಇಬ್ಬರು ಜಡ್ಜ್​​ಗಳಿದ್ದ ಪೀಠವು ವಿಭಿನ್ನ ಆದೇಶ ನೀಡಿದೆ. ಒಬ್ಬರು ಹೈಕೋರ್ಟ್ ಅದೇಶ ರದ್ದು ಮಾಡಿದ್ದಾರೆ, ಮತ್ತೊಬ್ಬರು ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದಾರೆ ಹೀಗಾಗಿ ಈ ಪ್ರಕರಣ ಸಿಜೆ ಅವರಿಗೆ ಹೋಗುತ್ತದೆ ಎಂದು ಹೇಳಿದರು.

ಶಾಸಕ ರಘುಪತಿ ಭಟ್​​

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ಮಾತನಾಡಿ, ಈ ಕುರಿತು ಅವರು ಮುಂದಿನ ನಿರ್ಧಾರ ಮಾಡಿ ಪ್ರಕರಣವನ್ನು ತ್ರೀಸದಸ್ಯ ಅಥವಾ ಪಂಚ ಪೀಠಕ್ಕೆ ಕೊಡುವುದಾ? ಸಾಂವಿಧಾನ ಪೀಠಕ್ಕೆ ಕೊಡುವುದಾ ಎಂಬ ನಿರ್ಧಾರ ಮಾಡುತ್ತಾರೆ ಎಂದರು.

ಇನ್ನು ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಆದೇಶ ಜಾರಿಯಲ್ಲಿರುತ್ತದೆ, ಹೈಕೋರ್ಟ್ ಆದೇಶ ಇಲ್ಲಿ ರದ್ದಾಗಲ್ಲಾ, ಈ ಆದೇಶದ ಪ್ರಕಾರ ತರಗತಿಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದ ಅವರು, ಇಬ್ಬರೂ ‌ನ್ಯಾಯಮೂರ್ತಿಗಳು ವಿಭಿನ್ನ ತೀರ್ಪು ನೀಡದಿದ್ದರೆ ಸುಪ್ರೀಂಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕಿತ್ತು, ನ್ಯಾಯಮೂರ್ತಿಗಳ ಆದೇಶವನ್ನು ನಾವು ಪ್ರಶ್ನೆ ಮಾಡಲಾಗಲ್ಲ, ಅದು ನ್ಯಾಯಮೂರ್ತಿಗಳಿಗೆ ಬಿಟ್ಟ ವಿಚಾರವಾಗಿದೆ ಎಂದರು.

ಇದನ್ನೂ ಓದಿ:ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದಿದ್ದೇನು.. ಹಿಜಾಬ್​ ಧರಿಸಲು ಅವಕಾಶ ಇದೆಯೋ, ಇಲ್ಲವೋ?

Last Updated : Oct 13, 2022, 5:44 PM IST

ABOUT THE AUTHOR

...view details