ಕರ್ನಾಟಕ

karnataka

ETV Bharat / state

ವಿಜಯಪುರದ ರಾಘವೇಂದ್ರ ಕುಲಕರ್ಣಿ ಅವರಿಗೆ ವಿಶ್ವದ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ - ಸಂಶೋಧನಾ ಪ್ರಬಂಧಗಳು

ಭಾರತದ ಸಂಶೋಧಕರ ಪೈಕಿ 15 ನೇ ಸ್ಥಾನ ಹಾಗೂ ವಿಶ್ವದಲ್ಲಿ ವಿಜಯಪುರದ ವಿಜ್ಞಾನಿ ಡಾ. ರಾಘವೇಂದ್ರ ಕುಲಕರ್ಣಿ 130 ನೇ ಸ್ಥಾನ ಪಡೆದಿದ್ದಾರೆ. ಅವರು 113 ಸಂಶೋಧನಾ ಪ್ರಕಟಣೆಗಳು, 87 ಸಂಶೋಧನಾ ಪ್ರಬಂಧಗಳು, 6 ಪುಸ್ತಕಗಳನ್ನು ರಚಿಸಿದ್ದಾರೆ. 7 ಪೇಟೆಂಟ್​ಗಳನ್ನು ಕೂಡ ಪಡೆದಿದ್ದಾರೆ.

Dr. Raghavendra Kulkarni
ಡಾ ರಾಘವೇಂದ್ರ ಕುಲಕರ್ಣಿ

By

Published : Oct 16, 2022, 6:50 PM IST

ವಿಜಯಪುರ: ಔಷಧ ವಿಜ್ಞಾನ ಹಾಗೂ ಪಾಲಿಮರ್ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ವಿಜಯಪುರದ ಬಿಎಲ್​ಡಿಇ ಡೀಮ್ಡ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ ಅವರಿಗೆ 2022ನೇ ಸಾಲಿನ ವಿಶ್ವದ ಉನ್ನತ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸತತ 2ನೇ ಬಾರಿ ಸ್ಥಾನ ಲಭಿಸಿದೆ.

ಅಮೆರಿಕದ ಸ್ಟ್ಯಾನ್​ಫೋರ್ಡ್ ವಿಶ್ವವಿದ್ಯಾಲಯ ಹಾಗೂ ನೆದರ್​ಲ್ಯಾಂಡ್​ನ ಎಲ್ಸ್​ವಿಯರ್ ಪ್ರಕಾಶನ ಸಂಸ್ಥೆಯು ಪ್ರತಿ ವರ್ಷವೂ ಸೈಟೇಷನ್ ಇಂಡೆಕ್ಸ್ ಆಧಾರದ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ವಿಜ್ಞಾನಿಗಳನ್ನು ಗುರುತಿಸಿ, ಅವರಲ್ಲಿ ಶ್ರೇಷ್ಠ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಕಲ್ಪಿಸುತ್ತದೆ. ಸತತ 2ನೇ ಬಾರಿ ಡಾ ರಾಘವೇಂದ್ರ ಕುಲಕರ್ಣಿ ಈ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಜಿಲ್ಲೆ, ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದಿದ್ದಾರೆ.

ಪಾಲಿಮರ್ ಆಧಾರಿತ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೈದ ಭಾರತದ ಸಂಶೋಧಕರ ಪೈಕಿ 15ನೇ ಸ್ಥಾನ ಹಾಗೂ ವಿಶ್ವದಲ್ಲಿ 130ನೇ ಸ್ಥಾನ ಪಡೆದಿದ್ದಾರೆ. ಡಾ ರಾಘವೇಂದ್ರ ಕುಲಕರ್ಣಿ ಅವರು 113 ಸಂಶೋಧನಾ ಪ್ರಕಟಣೆಗಳು, 87 ಸಂಶೋಧನಾ ಪ್ರಬಂಧಗಳು, 6 ಪುಸ್ತಕಗಳನ್ನು ರಚಿಸಿದ್ದಾರೆ. 7 ಪೇಟೆಂಟ್​ಗಳನ್ನು ಕೂಡ ಪಡೆದಿದ್ದಾರೆ.

ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಮರೆವು ಕಾಯಿಲೆ ಹಾಗೂ ಕ್ಯಾನ್ಸರ್​ನಂಥ ರೋಗಗಳ ಔಷಧ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ 91 ಲಕ್ಷ ರೂಪಾಯಿ ಅನುದಾನವನ್ನೂ ಪಡೆದುಕೊಂಡಿದ್ದಾರೆ. ಡಾ. ಕುಲಕರ್ಣಿ ಅವರು ಅಂತಾರಾಷ್ಟ್ರೀಯ ವಿಜ್ಞಾನ ನಿಯತಕಾಲಿಕಗಳ ಸಂಪಾದಕೀಯ ಸದಸ್ಯ ಹಾಗೂ ವಿಮರ್ಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಾಧನೆಗೆ ಬಿಎಲ್​ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಅಧ್ಯಕ್ಷ, ಮಾಜಿ ಸಚಿವ ಎಂ. ಬಿ. ಪಾಟೀಲ, ಕುಲಪತಿ ಡಾ. ಆರ್. ಎಸ್. ಮುಧೋಳ ಹಾಗೂ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:Nobel Prize for Medicine: ಸ್ವಾಂಟೆ ಪಾಬೊಗೆ ನೊಬೆಲ್​ ಪ್ರಶಸ್ತಿ

ABOUT THE AUTHOR

...view details