ವಿಜಯಪುರ:ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ಮದ್ಯೆ ಗಲಾಟೆ ನಡೆದಿದೆ.
ಸಂತೆಯಲ್ಲಿ 2 ಗುಂಪುಗಳ ಮಾರಾಮಾರಿ.. ವ್ಯಾಪಾರಸ್ಥರಿಗೆ ನಷ್ಟ - vijaypur cattels fair news
ವಿಜಯಪುರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ.
ಎಪಿಎಂಸಿ ಮಾರುಕಟ್ಟೆಯಲ್ಲಿ ಕುರಿಗಳ, ಜಾನುವಾರು ಸಂತೆಯಲ್ಲಿ ಕೆಲ ಗೊಂದಲ ಸೃಷ್ಟಿಯಾಗಿತ್ತು. ಇದರಿಂದಾಗಿ ವಾರದ ಕುರಿಗಳು ಹಾಗೂ ಜಾನುವಾರುಗಳ ಸಂತೆ ಸ್ಥಗಿತಗೊಂಡಿದೆ. ಗಲಾಟೆಯಿಂದಾಗಿ ರೈತರು ಹಾಗೂ ವ್ಯಾಪಾರಸ್ಥರು ದಿಕ್ಕಂಪಾಲಾಗಿ ಓಡಿಹೋಗಿದ್ದಾರೆ. ಮಾರುಕಟ್ಟೆಗೆ ತಂದಿದ್ದ ಜಾನುವಾರುಗಳನ್ನು ಬಿಟ್ಟು ಜನ್ರು ಓಡಾಡಿದ್ದಾರೆ.
ಇಂದು ಬೆಳಗ್ಗೆ ಮಾರುಕಟ್ಟೆ ನಡೆಯುತ್ತಿದ್ದ ಸ್ಥಳಕ್ಕೆ ಗಲಾಟೆ ಮಾಡುತ್ತ ಎರಡು ಗುಂಪುಗಳು ಆಗಮಿಸಿದ್ದವು. ಈ ವೇಳೆ ಗಲಾಟೆಯಿಂದ ಭಯಭೀತರಾಗಿ ಜನ್ರು ಓಡಾಡಿದ್ದಾರೆ. ಗಲಾಟೆ ಕಂಡು ಜಾನುವಾರುಗಳೊಂದಿಗೆ ರೈತರು, ವ್ಯಾಪಾರಸ್ಥರು ವಾಪಸ್ ಹೋಗಿದ್ದಾರೆ. ಗಲಾಟೆ ವಿಚಾರ ತಿಳಿದು ಸ್ಥಳಕ್ಕೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾರದ ಸಂತೆಯಲ್ಲಿ ಸುಮಾರು 20 ಲಕ್ಷ ರೂಪಾಯಿ ವಹಿವಾಟು ನಡೆಯುತ್ತಿತ್ತು. ಆದರೆ, ಇವತ್ತಿನ ಗಲಾಟೆಯಿಂದಾಗಿ ಸಂಪೂರ್ಣವಾಗಿ ವಹಿವಾಟು ಸ್ಥಗಿತಗೊಂಡಿದ್ದು, ರೈತರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.