ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಪುನೀತ್​​ ಅಭಿಮಾನಿಯಿಂದ ಆತ್ಮಹತ್ಯೆಗೆ ಯತ್ನ - ವಿಜಯಪುರದಲ್ಲಿ ಪುನೀತ್​​ ಅಭಿಮಾನಿಯಿಂದ ಆತ್ಮಹತ್ಯೆಗೆ ಯತ್ನ

40 ಡಯಾಬಿಟಿಸ್ ಮಾತ್ರೆ ಸೇವಿಸಿ ಆತ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಕುಟುಂಬಸ್ಥರು ಆತನನ್ನು ವಿಜಯಪುರ ಬಿಎಲ್‌ಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪುನೀತ್​ ಅಭಿಮಾನಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.‌.

ಮತ್ತೊಬ್ಬ ಪುನೀತ್​​ ಅಭಿಮಾನಿಯಿಂದ ಆತ್ಮಹತ್ಯೆಗೆ ಯತ್ನ
ಮತ್ತೊಬ್ಬ ಪುನೀತ್​​ ಅಭಿಮಾನಿಯಿಂದ ಆತ್ಮಹತ್ಯೆಗೆ ಯತ್ನ

By

Published : Oct 30, 2021, 5:38 PM IST

ವಿಜಯಪುರ :ಪವರ್‌ಸ್ಟಾರ್ ಪುನೀತ್​​ ರಾಜಕುಮಾರ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ಮಾನಸಿಕವಾಗಿ ನೊಂದಿದ್ದ ಅಭಿಮಾನಿಯೊಬ್ಬ ಬಿಪಿ ಟ್ಯಾಬ್ಲೆಟ್ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಸಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ನಡೆದಿದೆ.

ಶರಣಪ್ಪ ಬಿಸನಾಳ (24) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಪುನೀತ್​ ಸಾವನ್ನಪ್ಪಿದ ವಿಚಾರ ತಿಳಿದ ಬಳಿಕ ಶರಣಪ್ಪ ನೊಂದುಕೊಂಡಿದ್ದ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ 40 ಡಯಾಬಿಟಿಸ್ ಮಾತ್ರೆ ಸೇವಿಸಿ ಆತ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಕುಟುಂಬಸ್ಥರು ಆತನನ್ನು ವಿಜಯಪುರ ಬಿಎಲ್‌ಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಪುನೀತ್​ ಅಭಿಮಾನಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.‌

ಕೈ ಜಜ್ಜಿಕೊಂಡು ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸಿದ ರಿಕ್ಷಾ ಡ್ರೈವರ್ :

ಪುನೀತ್ ರಾಜ್‍ಕುಮಾರ್ ನಿಧನ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಅಪ್ಪು ಅಭಿಮಾನಿಯೊಬ್ಬ ಕೈ ಜಜ್ಜಿಕೊಂಡು ಶ್ರದ್ಧಾಂಜಲಿ ಅರ್ಪಿಸಿದ್ದಾನೆ. ಸಾಲಿಗ್ರಾಮದ ರಿಕ್ಷಾ ಡ್ರೈವರ್ ಸತೀಶ್ (35)ಕೈ ಜಜ್ಜಿಕೊಂಡ ಪುನೀತ್ ಅಭಿಮಾನಿಯಾಗಿದ್ದಾನೆ. ತನ್ನ ರಿಕ್ಷಾಕ್ಕೆ ಕೈಯನ್ನು ಜಜ್ಜಿಕೊಂಡು ಶ್ರದ್ಧಾಂಜಲಿ ಅರ್ಪಿಸಿದ್ದಾನೆ.

ABOUT THE AUTHOR

...view details