ಕರ್ನಾಟಕ

karnataka

ETV Bharat / state

ಬೈಕ್​ಗೆ ಕಾರು ಡಿಕ್ಕಿ: ಪಿಯುಸಿ ಪರೀಕ್ಷೆ ಬರೆದು ಮನೆಗೆ ಹೋಗ್ತಿದ್ದ ವಿದ್ಯಾರ್ಥಿ ಸಾವು! - ಅಪಘಾತದಲ್ಲಿ ಪಿಯುಸಿ ವಿದ್ಯಾರ್ಥಿ ಸಾವು

ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಪಿಯುಸಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ವಿಜಯಪುರದ ಕೋಲ್ಹಾರ ತಾಲೂಕಿನ ಮಲಘಾಣ ಕ್ರಾಸ್ ಬಳಿ ನಡೆದಿದೆ.

PUC student death in vijayapur
ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಪಿಯುಸಿ ವಿದ್ಯಾರ್ಥಿ ಸಾವು

By

Published : Jun 18, 2020, 10:23 PM IST

Updated : Jun 18, 2020, 10:40 PM IST

ವಿಜಯಪುರ: ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಮುಗಿಸಿ ಬೈಕ್ ಮೇಲೆ ತೆರಳುತ್ತಿದ್ದ ವಿದ್ಯಾರ್ಥಿಗಳ ಬೈಕ್​​​ಗೆ ಕಾರು ಮುಖಾಮುಖಿ ಡಿಕ್ಕಿಯಾಗಿ ಒಬ್ಬ ವಿದ್ಯಾರ್ಥಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೋಲ್ಹಾರ ತಾಲೂಕಿನ ಮಲಘಾಣ ಕ್ರಾಸ್ ಬಳಿ ನಡೆದಿದೆ.

ಮಲಘಾಣ ಕ್ರಾಸ್ ಬಳಿ ಎನ್​ಹೆಚ್​ 218ರಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿ ಮಂಜುನಾಥ ರೂಡಗಿ (18) ಎಂಬಾತ ಮೃತಪಟ್ಟಿದ್ದಾನೆ. ಸಂಗು ಜಮಖಂಡಿ, ನೀಲಪ್ಪ ಜಮಖಂಡಿ, ರಮೇಶ ಮೋಹಿತೆ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ವಿಜಯಪುರ ನಗರದ‌ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ಬೈಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ: ಪಿಯುಸಿ ವಿದ್ಯಾರ್ಥಿ ಸಾವು

ಪರೀಕ್ಷೆ ಬರೆದು ಸ್ವಗ್ರಾಮ ರೋಣಿಹಾಳಕ್ಕೆ ವಾಪಸ್ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಘಟ‌ನೆ ಬಳಿಕ ಕಾರ್ ಚಾಲಕ ಪರಾರಿಯಾಗಿದ್ದು, ಕೋಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jun 18, 2020, 10:40 PM IST

ABOUT THE AUTHOR

...view details