ವಿಜಯಪುರ/ಮುದ್ದೇಬಿಹಾಳ: ನೇಣು ಬಿಗಿದ ಸ್ಥಿತಿಯಲ್ಲಿ ಪಿಯು ವಿದ್ಯಾರ್ಥಿಯ ಶವ ಪತ್ತೆಯಾದ ಘಟನೆ ತಾಲೂಕಿನ ನಾಗರಬೆಟ್ಟದ ಖಾಸಗಿ ವಸತಿ ಕಾಲೇಜೊಂದರಲ್ಲಿ ನಡೆದಿದೆ. ಅಜಯಕುಮಾರ್ ವಿರುಪಾಕ್ಷಿ ನುಚ್ಚಿ (18) ಮೃತ ವಿದ್ಯಾರ್ಥಿ. ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಈತ, ಓದುವ ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮುದ್ದೇಬಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ಮುದ್ದೇಬಿಹಾಳ: ಓದುವ ಒತ್ತಡ ತಾಳಲಾರದೆ ವಿದ್ಯಾರ್ಥಿ ಆತ್ಮಹತ್ಯೆ - student committed suicide in muddebihal
ಓದುವ ಒತ್ತಡ ತಾಳಲಾರದೆ ನಾಗರಬೆಟ್ಟದ ಖಾಸಗಿ ವಸತಿ ಕಾಲೇಜಿನ ಪಿಯು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ವಿದ್ಯಾರ್ಥಿ ಆತ್ಮಹತ್ಯೆ