ವಿಜಯಪುರ:ವೈದ್ಯರಿಲ್ಲದೇ ಗಾಯಾಳುಗಳು ಪರದಾಡುತ್ತಿರೋದನ್ನ ಕಂಡು ಆಕ್ರೋಶಗೊಂಡ ಸಂಬಂಧಿಕರು ಹಾಗೂ ಸಾರ್ವಜನಿಕರು ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ ಘಟನೆ ಸಿಂದಗಿಯಲ್ಲಿ ನಡೆದಿದೆ.
ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ.. ಆಸ್ಪತ್ರೆಯಲ್ಲಿ ಸಂಬಂಧಿಕರಿಂದ ದಾಂಧಲೆ! - Sindagi Taluk Hospital
ಗಾಯಗೊಂಡಿದ್ದ ಗಾಯಾಳು ಚೀರಾಟ ನೋಡಿ ಸಂಬಂಧಿಕರು ಹಾಗೂ ಸಾರ್ವಜನಿಕರು ಆಸ್ಪತ್ರೆ ಸಿಬ್ಬಂದಿಯನ್ನ ತರಾಟೆ ತೆಗೆದುಕೊಂಡು ದಾಂಧಲೆ ಮಾಡಿದ್ದಾರೆ.
ವೈದ್ಯರಿಲ್ಲದೇ ಗಾಯಾಳುಗಳ ಚೀರಾಟ..ವೈದ್ಯಾಧಿಕಾರಿಗಳ ಆಕ್ರೋಶಗೊಂಡ ಸಾರ್ವಜನಿಕರಿಂದ ದಾಂಧಲೆ
ಸಿಂದಗಿ ಪೊಲೀಸ್ ಠಾಣೆಯ ಎದುರಿನಲ್ಲಿ ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಇಬ್ಬರು ಬೈಕ್ ಸವಾರರು ಗಾಯಗೊಂಡಿದ್ದರು. ಅವರನ್ನು ತಕ್ಷಣ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯರೇ ಇರಲಿಲ್ಲ. ಗಾಯಗೊಂಡಿದ್ದ ಗಾಯಾಳು ಚೀರಾಟ ನೋಡಿ ಸಂಬಂಧಿಕರು ಹಾಗೂ ಸಾರ್ವಜನಿಕರು ಆಸ್ಪತ್ರೆ ಸಿಬ್ಬಂದಿಯನ್ನ ತರಾಟೆ ತೆಗೆದುಕೊಂಡು ದಾಂಧಲೆ ಮಾಡಿದ್ದಾರೆ.
ತಾಲೂಕು ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಆರೋಗ್ಯ ಸಚಿವರ ವಿರುದ್ಧವೂ ಘೋಷಣೆ ಕೂಗಿದ್ರು.