ಕರ್ನಾಟಕ

karnataka

ETV Bharat / state

ಅಷ್ಟು ಹಣ ಎಲ್ಲಿಂದ ತರೋಕಾಗುತ್ತೆ?: ಇನ್ನೂ ಹತ್ತು ಸಲ ಪರೀಕ್ಷೆ ಬರೆದ್ರೂ ಮಗಳು ಪಾಸಾಗ್ತಾಳೆ.. ರಚನಾ ಕುಟುಂಬಸ್ಥರ ವಿಶ್ವಾಸ - ಪಿಎಸ್​ಐ ನೇಮಕಾತಿ ಹಗರಣ

ನಮ್ಮ ಮಗಳು ಶಾಲೆಯಲ್ಲಿ ಯಾವತ್ತಿಗೂ ಮೊದಲ ಸ್ಥಾನ ಪಡೆಯುತ್ತಿದ್ದಳು. ಆಕೆ ವಿರುದ್ಧ ಈಗ ಕೇಳಿ ಬಂದಿರುವ ಆರೋಪದ ಬಗ್ಗೆ ನಮಗೇನೂ ಗೊತ್ತಿಲ್ಲ. ದುಡಿದು ಜೀವನ ನಡೆಸುವ ನಮಗೆ ಅಷ್ಟು ಹಣ ಎಲ್ಲಿಂದ ತರೋಕಾಗುತ್ತೆ? ಎಂದು ದೊಡ್ಡಮ್ಮ ಕಸ್ತೂರಿಬಾಯಿ ಅಳಲು ತೋಡಿಕೊಂಡಿದ್ದಾರೆ..

psi-exam-scam-in-vijayapura-reaction-of-first-rank-holder-relative
ಅಷ್ಟು ಹಣ ಎಲ್ಲಿಂದ ತರೋಕಾಗುತ್ತೆ?: ಪಿಎಸ್​​ಐ ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ರಚನಾ ಕುಟುಂಬಸ್ಥರ ಅಳಲು!

By

Published : May 4, 2022, 11:58 AM IST

Updated : May 4, 2022, 4:40 PM IST

ವಿಜಯಪುರ:ಪಿಎಸ್​​ಐ ಪರೀಕ್ಷೆಯಲ್ಲಿ ಅಕ್ರಮ ವಿಚಾರವಾಗಿ ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ರಚನಾ ಮುತ್ತಲಗೇರಿ ಕುಟುಂಬಸ್ಥರು ಈಗ ಕಣ್ಣೀರು ಹಾಕುವಂತಾಗಿದೆ.‌ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿರುವ ರಚನಾ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ರಚನಾ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಿಂದ ರಚನಾ ಸಂಪರ್ಕ ಇಲ್ಲದೆ ಅವರ ದೊಡ್ಡಮ್ಮ ಹಾಗೂ ಕುಟುಂಬಸ್ಥರು ಆತಂಕಗೊಂಡಿದ್ದಾರೆ.‌ ರಚನಾ ಜೊತೆಗೆ ತೆರಳಿದ್ದ ಆಕೆಯ ಅಣ್ಣನ ಮೊಬೈಲ್ ಸಹ ಬಂದ್ ಆಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನೊಂದೆಡೆ ರಚನಾ ತಾಯಿ ಸಾವಿತ್ರಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ರಚನಾ ಮುತ್ತಲಗೇರಿ ದೊಡ್ಡಮ್ಮ ಕಸ್ತೂರಿಬಾಯಿ

ರಚನಾ ರ‍್ಯಾಂಕ್ ಸ್ಟುಡೆಂಟ್​ ​:ನಮ್ಮ ಮಗಳು ಶಾಲೆಯಲ್ಲಿ ಯಾವತ್ತಿಗೂ ಮೊದಲ ಸ್ಥಾನ ಪಡೆಯುತ್ತಿದ್ದಳು. 10ನೇ ತರಗತಿ, ದ್ವಿತೀಯ ಪಿಯುಸಿ ಸೇರಿದಂತೆ ಎಲ್ಲೆಡೆ ರ‍್ಯಾಂಕ್ ಪಡೆದಿದ್ದಳು. ಆಕೆ ವಿರುದ್ಧ ಈಗ ಕೇಳಿ ಬಂದಿರುವ ಆರೋಪದ ಬಗ್ಗೆ ನಮಗೇನೂ ಗೊತ್ತಿಲ್ಲ. ದುಡಿದು ಜೀವನ ನಡೆಸುವ ನಮಗೆ ಅಷ್ಟು ಹಣ ಎಲ್ಲಿಂದ ತರೋಕಾಗುತ್ತೆ? ಎಂದು ದೊಡ್ಡಮ್ಮ ಕಸ್ತೂರಿಬಾಯಿ ಅಳಲು ತೋಡಿಕೊಂಡಿದ್ದಾರೆ.

ಹೆಣ್ಣು ಎಂದು ಬಿಟ್ಟುಹೋಗಿದ್ದ ತಂದೆ: ರಚನಾ ಮೊದಲಿನಿಂದಲೂ ಬಡತನದಲ್ಲಿಯೇ ಬೆಳೆದುಬಂದಿದ್ದಳು. ತಂದೆ ಕೂಡ ಆಕೆಯ ತಾಯಿಯನ್ನೂ ಈ ಮುನ್ನವೇ ತೊರೆದಿದ್ದ. ಪತ್ನಿಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ಧಾಳೆಂದು, ನನಗೆ ನಿನ್ನೊಂದಿಗೆ ಇರಲಾಗದು ಎಂದು ಹೇಳಿ ಬಿಟ್ಟು ಹೋಗಿದ್ದ. ಬಳಿಕ ಕೋರ್ಟ್​ನಲ್ಲಿ ಪರಿಹಾರ ನೀಡುವಂತೆ ಆದೇಶ ಬಂದಿತ್ತಾದರೂ, ರಚನಾ ತಾಯಿ ಆತನಿಂದ ಇಂದಿನವರೆಗೂ ಯಾವುದೇ ಹಣ ಪಡೆದಿಲ್ಲ. ತಾಯಿಯ ಆಶ್ರಯದಲ್ಲೇ ಬೆಳೆದ ನಮ್ಮ ಮಗಳು ಇಂದು ಪಿಎಸ್​ಐ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮಟ್ಟಕ್ಕೇರಿದ್ದಳು ಎಂದು ಹೇಳಿದರು.

10 ಸಲ ಪರೀಕ್ಷೆಗೂ ಸಿದ್ಧ:ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಸತ್ಯ ಏನಿದೆಯೋ ಅದು ಹೊರಗೆ ಬರಲಿ, ಸರ್ಕಾರ ಏನು ನಿರ್ಧಾರ ಮಾಡುತ್ತದೆಯೋ ಅದಕ್ಕೆ ನಾವು ಬದ್ಧರಾಗಿದ್ದೇವೆ. ಈ ಹಿಂದೆ ಎರಡು ಸಲ ರಚನಾ ಪಿಎಸ್ಐ ಪರೀಕ್ಷೆ ಬರೆದಿದ್ದಳು. ಆದರೆ, ಆಗ ಕೆಲವೇ ಅಂಕಗಳಿಂದ ಪಾಸ್ ಆಗಿರಲಿಲ್ಲ. ಆದರೂ ಆಕೆ ಕಠಿಣ ಪರಿಶ್ರಮದಿಂದ ಪರೀಕ್ಷೆ ಬರೆದು ಪಾಸ್ ಆಗಿದ್ದಾಳೆ. ಇನ್ನೂ ಹತ್ತು ಸಲ ಬೇಕಾದರೂ ಆಕೆ ಪರೀಕ್ಷೆ ಬರೆಯಲು ತಯಾರಿದ್ದಾಳೆ ಎಂದು ಕಸ್ತೂರಿ ಬಾಯಿ ಹೇಳಿದ್ದಾರೆ.

ಇದನ್ನೂ ಓದಿ:ನಕಲಿ ನೇಮಕಾತಿ ಅಧಿಸೂಚನೆ: ಸಾರ್ವಜನಿಕರಿಗೆ ರೈಲ್ವೆ ಇಲಾಖೆ ಎಚ್ಚರಿಕೆ

Last Updated : May 4, 2022, 4:40 PM IST

ABOUT THE AUTHOR

...view details