ಮುದ್ದೇಬಿಹಾಳ(ವಿಜಯಪುರ) :ಕೊರೊನಾ ವೈರಸ್ನ ಸಂದಿಗ್ಥ ಪರಿಸ್ಥಿತಿಯಲ್ಲಿ ಮಾಧ್ಯಮದವರೂ ಕೊರೊನಾ ವಾರಿಯರ್ಸ್ಗಳಾಗಿ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಇದಕ್ಕಾಗಿ ಅವರನ್ನೂ ಸರ್ಕಾರ ವಿಶೇಷ ವಿಮೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಇಲ್ಲಿನ ಕುಂಟೋಜಿ ಸಂಸ್ಥಾನ ಹಿರೇಮಠದ ಚೆನ್ನವೀರ ದೇವರು ಆಗ್ರಹಿಸಿದ್ದಾರೆ.
ಪತ್ರಕರ್ತರಿಗೂ ಆರೋಗ್ಯ ವಿಮೆ ಕಲ್ಪಿಸಿ.. ಕುಂಟೋಜಿ ಚೆನ್ನವೀರ ಶ್ರೀ ಆಗ್ರಹ.. - CM BS Yeddyurappa
ಕಳೆದೆರಡು ತಿಂಗಳಿನಿಂದ ಕೊರೊನಾ ವೈರಸ್ ಹರಡುತ್ತಿದೆ. ವೈದ್ಯರು, ಪೊಲೀಸರು ಸೇರಿದಂತೆ ಮಾಧ್ಯಮದವರೂ ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ. ಹೀಗಾಗಿ ಇವರನ್ನೂ ಗಣನೆಗೆ ತೆಗೆದುಕೊಳ್ಳಬೇಕು ಅವರನ್ನೂ ಆರೋಗ್ಯ ವಿಮೆಯಡಿ ತರಬೇಕು ಎಂದು ಕುಂಟೋಜಿ ಚೆನ್ನವೀರ ಶ್ರೀ ಆಗ್ರಹಿಸಿದ್ದಾರೆ.
ಪತ್ರಕರ್ತರಿಗೂ ಆರೋಗ್ಯ ವಿಮೆ ಕಲ್ಪಿಸಿ: ಕುಂಟೋಜಿ ಚೆನ್ನವೀರ ಶ್ರೀ ಆಗ್ರಹ
ಕುಂಟೋಜಿಯ ತಮ್ಮ ಮಠದಲ್ಲಿ ಈಟಿವಿ ಭಾರತ್ನೊಂದಿಗೆ ಮಾತನಾಡಿದ ಅವರು, ಕಳೆದೆರಡು ತಿಂಗಳಿನಿಂದ ಕೊರೊನಾ ವೈರಸ್ ಹರಡುತ್ತಿದೆ. ರಾಜ್ಯ ಸರ್ಕಾರ ಗಮನಿಸಬೇಕಾದ ವಿಷಯ ಏನೆಂದರೆ ಮಾಧ್ಯಮದವರನ್ನು ಗಣನೆಗೆ ತೆಗೆದುಕೊಳ್ಳಬೇಕು.
ರಾಜ್ಯ ಸರ್ಕಾರ ಪತ್ರಕರ್ತರನ್ನು ಗುರುತಿಸಿ ಅವರಿಗೂ ಗೌರವ ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಠದ ಭಕ್ತ ಮಹಾಂತೇಶ ಬೂದಿಹಾಳಮಠ ಇದ್ದರು. ಇದೇ ವೇಳೆ ಮಠದಲ್ಲಿ ಪತ್ರಕರ್ತರಾದ ಶಂಕರ ಹೆಬ್ಬಾರ್, ಗುಲಾಮ ಮೊಹ್ಮದ್ ದಫೇದಾರರಿಗೆ ಸನ್ಮಾನಿಸಿ ಗೌರವಿಸಲಾಯಿತು.