ವಿಜಯಪುರ: ಕೊರೊನಾ ವೈರಸ್ ಆತಂಕದಲ್ಲಿರುವ ವಿಕಲಚೇತನರಿಗೆ ದಿನಸಿ ಹಾಗೂ ಮೆಡಿಕಲ್ ಕಿಟ್ ನೀಡುವಂತೆ ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತ ವಿಕಲಚೇತನರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ವಿಕಲಚೇತನರಿಗೆ ದಿನಸಿ-ಮೆಡಿಕಲ್ ಕಿಟ್ ನೀಡಬೇಕು, ವಿಜಯಪುರ ಡಿಸಿಗೆ ಮನವಿ - ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತ ವಿಕಲಚೇತನರ ಸಂಘ
ಕೊರೊನಾ ವೈರಸ್ ಆತಂಕದಲ್ಲಿರುವ ವಿಕಲಚೇತನರಿಗೆ ದಿನಸಿ ಹಾಗೂ ಮೆಡಿಕಲ್ ಕಿಟ್ ನೀಡುವಂತೆ ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತ ಅಂಗವಿಕಲರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
![ವಿಕಲಚೇತನರಿಗೆ ದಿನಸಿ-ಮೆಡಿಕಲ್ ಕಿಟ್ ನೀಡಬೇಕು, ವಿಜಯಪುರ ಡಿಸಿಗೆ ಮನವಿ Provide groceries medical kit to handicat Vijayapura DC](https://etvbharatimages.akamaized.net/etvbharat/prod-images/768-512-7221571-738-7221571-1589631213443.jpg)
ವಿಕಲಚೇತನರಿಗೆ ದಿನಸಿ-ಮೆಡಿಕಲ್ ಕಿಟ್ ನೀಡಬೇಕು, ವಿಜಯಪುರ ಡಿಸಿಗೆ ಮನವಿ..
ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ವಿಕಲಚೇತನರು, ನಮಗೆ ಲಾಕ್‌ಡೌನ್‌ದಿಂದ ಜಿಲ್ಲಾಡಳಿತದಿಂದ ಯಾವುದೇ ಆಹಾರ ಸಾಮಗ್ರಿಗಳು ದೂರತಿಲ್ಲ. ತುತ್ತು ಅನ್ನಕ್ಕಾಗಿ ಕಷ್ಟ ಪಡುವಂತಾಗಿದೆ. ಸರ್ಕಾರದಿಂದ ಮೆಡಿಕಲ್ ಕಿಟ್ ಆಹಾರ ಸಾಮಗ್ರಿ ನೀಡಿ ಎಂದು ಮನವಿ ಮಾಡಿದರು.
ಇತ್ತ ಸರ್ಕಾರದ ಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ. ಲಾಕ್‌ಡೌನ್ ಜಾರಿ ದಿನದಿಂದ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರಾಜ್ಯ ವಿಕಲಚೇತನರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.