ವಿಜಯಪುರ: ಎಪಿಎಂಸಿ, ಭೂಸ್ವಾಧೀನ ಕಾಯ್ದೆ ವಿರೋಧಿಸಿ ವಿಜಯಪುರದಲ್ಲಿ ರೈತರಿಂದ ವಿನೂತನ ಪ್ರತಿಭಟನೆ ನಡೆಸಲಾಯಿತು. ದುರುಗಮುರಗ ಸಮುದಾಯದವರು ಮೈಮೇಲೆ ಚಾಟಿ ಏಟು ಹಾಕಿಕೊಂಡು ಪ್ರತಿಭಟನೆ ಮಾಡಿದರು.
ನೂತನ ಕೃಷಿ ಮಸೂದೆ ವಿರೋಧಿಸಿ ದುರುಗಮುರುಗ ಸಮುದಾಯ, ರೈತರಿಂದ ವಿನೂತನ ಪ್ರತಿಭಟನೆ! - ದುರುಗಮುರುಗ ಸಮುದಾಯದ ಆಗ್ರಹ
ದುರುಗಮುರುಗ ಸಮುದಾಯವನ್ನು ಎಸ್.ಟಿಗೆ ಸೇರಿಸುವಂತೆ ಆಗ್ರಹಿಸಿ ಹಾಗೂ ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡಲಾಯಿತು.
![ನೂತನ ಕೃಷಿ ಮಸೂದೆ ವಿರೋಧಿಸಿ ದುರುಗಮುರುಗ ಸಮುದಾಯ, ರೈತರಿಂದ ವಿನೂತನ ಪ್ರತಿಭಟನೆ! protest](https://etvbharatimages.akamaized.net/etvbharat/prod-images/768-512-8918510-127-8918510-1600936583069.jpg)
protest
ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಿ, ದುರುಗಮುರುಗ ಸಮುದಾಯವನ್ನು ಎಸ್.ಟಿಗೆ ಸೇರಿಸುವಂತೆ ಆಗ್ರಹಿಸಲಾಯಿತು. ಜೊತೆಗೆ ಎಪಿಎಂಸಿ ಕಾಯ್ದೆ, ಭೂಸುಧಾರಣಾ ಕಾಯ್ದೆ ವಿರೋಧಿಸಿ ರೈತರಿಂದಲೂ ಪ್ರತಿಭಟನೆ ಮಾಡಲಾಯಿತು.
ವಿನೂತನ ಪ್ರತಿಭಟನೆ
ರೈತರು ಹಾಗೂ ದುರುಗಮುರುಗ ಸಮುದಾಯದವರು ಜಂಟಿಯಾಗಿ ಪ್ರತಿಭಟನೆ ನಡೆಸಿದರು. ರೈತ ಮುಖಂಡ ಅರವಿಂದ ಕುಲಕರ್ಣಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.