ಕರ್ನಾಟಕ

karnataka

ETV Bharat / state

ಬ್ಯಾಂಕ್​ ಮ್ಯಾನೇಜರ್​ ವಿರುದ್ಧ ಕ್ರಮಕ್ಕೆ ಆಗ್ರಹ: ಡಿಸಿ ಕಚೇರಿ ಎದುರು ಯುವಕನ ಅರೆ ಬೆತ್ತಲೆ ಪ್ರತಿಭಟನೆ! - ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್

ಅವಾಚ್ಯ ಪದಗಳಿಂದ ನಿಂದಿಸಿದ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಯುವಕನೋರ್ವ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾನೆ.‌

protest
protest

By

Published : Jun 17, 2020, 12:47 PM IST

ವಿಜಯಪುರ:ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಅವಾಚ್ಯ ಶಬ್ದಗಳಂದ ನಿಂದಿಸಿ, ಬ್ಯಾಂಕ್‌ನಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿ ಯುವಕನೊರ್ವ ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ ಘಟನೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದಿದೆ.

ಯುವಕನ ಅರೆ ಬೆತ್ತಲೆ ಪ್ರತಿಭಟನೆ!

ಬಸವನ ಬಾಗೇವಾಡಿ ತಾಲೂಕಿನ‌ ಹೂವಿನ ಹಿಪ್ಪರಗಿಯ ಸಿಂಡಿಕೇಟ್ ಬ್ಯಾಂಕ್‌ಗೆ ಯುವಕ ವೆಂಕಟೇಶ ದೊಡ್ಡಮನಿ ಗುತ್ತಿಗೆದಾರ ಲೈಸನ್ಸ್ ಪಡೆಯಲು 2 ಲಕ್ಷ ರೂ.ಗಳ ಸಾಲದ ಪತ್ರ ಪಡೆಯಲು ಹೋಗಿದ್ದಾಗ ಬ್ಯಾಂಕ್ ಮ್ಯಾನೇಜರ್ ಅರ್ಜಿಯನ್ನ ಸ್ವೀಕರಿಸದೆ ನಿಂದಿಸಿರೋದಾಗಿ ಯುವಕ ಆರೋಪಿಸಿದ್ದಾನೆ. ಅಲ್ಲದೇ ಬ್ಯಾಂಕ್‌ನಿಂದ ತನ್ನನ್ನು ಹೊರಹಾಕಿದ್ದಾರೆ ಎಂದು ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದಾನೆ.

ಅವಾಚ್ಯ ಪದಗಳಿಂದ ನಿಂದಿಸಿದ ಹೂವಿನ‌ಹಿಪ್ಪರಗಿ ಶಾಖೆಯ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಸೂಕ್ತ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗುವಂತೆ ಪ್ರತಿಭಟನಾ ಯುವಕ ವೆಂಕಟೇಶ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತಿದ್ದಾನೆ.

ABOUT THE AUTHOR

...view details