ಕರ್ನಾಟಕ

karnataka

ETV Bharat / state

ನಕಲಿ‌ ರಸಗೊಬ್ಬರ ತಯಾರಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ - Vijayapura Protest News

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಅಲಮೇಲ ಗ್ರಾಮದಲ್ಲಿ ನಕಲಿ ರಸಗೊಬ್ಬರ ತಯಾರಿಕೆ ಜಾಲ ಬೆಳಕಿದೆ ಬಂದಿದೆ. ಅವುಗಳನ್ನು ರೈತರು ಬೆಳೆಗಳಿಗೆ ಹಾಕುತ್ತಿರುವುದರಿಂದ ಬೆಳೆಗಳು ಹಾಳಾಗುತ್ತಿವೆ. ನಕಲಿ ಗೊಬ್ಬರ ಬಳಕೆಯಿಂದ ಮನುಷ್ಯನ ದೇಹದ ಮೇಲೆ ಕೂಡಾ ಪರಿಣಾಮ ಬಿರುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರು ಆಕ್ರೋಶ ಹೊರ‌ ಹಾಕಿದರು.

ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟನೆ
ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟನೆ

By

Published : Jul 14, 2020, 1:46 PM IST

ವಿಜಯಪುರ: ನಕಲಿ ರಸಗೊಬ್ಬರ ತಯಾರಕರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಗೋವಿನಜೋಳದ ದಂಟು ಹಿಡಿದು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ರೈತ ಸಂಘಟನೆ ಕಾರ್ಯಕರ್ತರು, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಅಲಮೇಲ ಗ್ರಾಮದಲ್ಲಿ ನಕಲಿ ರಸಗೊಬ್ಬರ ತಯಾರಿಕೆ ಜಾಲ ಬೆಳಕಿದೆ ಬಂದಿದೆ. ಅವುಗಳನ್ನು ರೈತರು ಬೆಳೆಗಳಿಗೆ ಹಾಕುತ್ತಿರುವುದರಿಂದ ಬೆಳೆಗಳು ಹಾಳಾಗುತ್ತಿವೆ. ನಕಲಿ ಗೊಬ್ಬರ ಬಳಕೆಯಿಂದ ಮನುಷ್ಯನ ದೇಹದ ಮೇಲೆ ಕೂಡ ಪರಿಣಾಮ ಬಿರುವ ಸಾಧ್ಯತೆ ಇದೆ ಎಂದು ಪ್ರತಿಭಟನಾಕಾರು ಆಕ್ರೋಶ ಹೊರ‌ ಹಾಕಿದರು.

ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಪ್ರತಿಭಟನೆ

ಅಲಮೇಲ ಗ್ರಾಮದಲ್ಲಿ 299 ಚೀಲ ನಕಲಿ ರಸಗೊಬ್ಬರ ತಯಾರಿಸುವ ಜಾಲ ಪತ್ತೆಯಾಗಿದ್ದು, ಅನಧಿಕೃತವಾಗಿ ತಯಾರಿಸಿದ ಗೊಬ್ಬರವನ್ನು ರೈತರು ಬಳಸದಂತೆ ಕೃಷಿ ಇಲಾಖೆ ಮೂಲಕ ಜಿಲ್ಲಾಡಳಿತ ರೈತರಿಗೆ ಜಾಗೃತಿ ಮೂಡಿಸಬೇಕು ಹಾಗೂ ಅವರ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ರೈತ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details