ವಿಜಯಪುರ :ನಗರದ ಗ್ರಾಮೀಣ ಠಾಣೆಯ ಪಿಎಸ್‌ಐ ಹಾಗೂ ಓರ್ವ ಕಾನ್ಸ್‌ಟೇಬಲ್ ಅಮಾನತು ಮಾಡಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿದರು.
ಪಿಎಸ್‌ಐ, ಕಾನ್ಸ್‌ಟೇಬಲ್ ವಿರುದ್ಧ ಡಿಎಸ್ಎಸ್ನಿಂದ ಪ್ರತಿಭಟನೆ - ಅಂಬೇಡ್ಕರ್ ವೃತ್ತ
ಅಧಿಕಾರ ದುರುಪಯೋಗ ಮಾಡಿಕೊಂಡು ಠಾಣೆಯ ಹೆಸರು ಹಾಳು ಮಾಡುತ್ತಿದ್ದಾರೆಂದು ದಲಿತ ಪರ ಸಂಘಟನೆ ಕಾರ್ಯಕರ್ತರ ಆರೋಪ..
ನಗರದ ಅಂಬೇಡ್ಕರ್ ವೃತ್ತದಲ್ಲಿ ಪಿಎಸ್‌ಐ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಅಧಿಕಾರಿ ಭ್ರಷ್ಟರಾಗಿದ್ದಾರೆ, ಅಲ್ಲದೇ ಸರ್ವಾಧಿಕಾರಿ ಧೋರಣೆ ನಡೆಸುತ್ತಾ ಸಂಘಟನೆ ಮುಖಂಡರಿಗೆ ಗೌರವ ನೀಡುತ್ತಿಲ್ಲ, ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆ. ಅಧಿಕಾರ ದುರುಪಯೋಗ ಮಾಡಿಕೊಂಡು ಠಾಣೆಯ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ದಲಿತ ಪರ ಸಂಘಟನೆ ಕಾರ್ಯಕರ್ತರು ಆರೋಪಿದರು.
ಅನುಚಿತವಾಗಿ ವರ್ತಿಸುತ್ತಿರುವ ಗ್ರಾಮೀಣ ಠಾಣೆ ಪಿಎಸ್‌ಐ ಹಾಗೂ ಕಾನ್ಸ್‌ಟೇಬಲ್ ಕರ್ತವ್ಯದಿಂದ ಅಮಾನತು ಮಾಡುವಂತೆ ಆಗ್ರಹಿಸಿ ಡಿಎಸ್‌ಎಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.