ಕರ್ನಾಟಕ

karnataka

ETV Bharat / state

ಎಸ್‌ಸಿ ಪಟ್ಟಿಯಿಂದ 4 ಜಾತಿಗಳನ್ನು ಕೈಬಿಡಬಾರದು.. ಭಾರತೀಯ ಬಂಜಾರ ಕ್ರಾಂತಿ‌‌ದಳ ಪ್ರತಿಭಟನೆ - ಎಸ್‌ಸಿ ಪಟ್ಟಿಯಿಂದ 4 ಜಾತಿಗಳನ್ನು ಕೈಬಿಡಬಾರದು

ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳನ್ನು ಸರ್ಕಾರ ಎಸ್‌ಸಿ ಪಟ್ಟಿಯಿಂದ ತೆಗೆದುಹಾಕಿ ಅನ್ಯಾಯ ಮಾಡುತ್ತಿದೆ. ಹೀಗಾಗಿ ಆ ಸಮುದಾಯವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ.

ptotest
ಮನವಿ

By

Published : Jun 9, 2020, 7:30 PM IST

ವಿಜಯಪುರ :ಎಸ್‌ಸಿ (ಪರಿಶಿಷ್ಟ ಜಾತಿ) ಪಟ್ಟಿಯಿಂದ ಲಂಬಾಣಿ, ಭೋವಿ ಕೊರಚ ಮತ್ತು ಕೊರಮ ಜಾತಿಗಳನ್ನು ಕೈಬಿಡಬಾರದು ಎಂದು ಒತ್ತಾಯಿಸಿ ಭಾರತೀಯ ಬಂಜಾರ ಕ್ರಾಂತಿ‌‌ದಳ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳನ್ನು ಸರ್ಕಾರ ಎಸ್‌ಸಿ ಪಟ್ಟಿಯಿಂದ ತೆಗೆದುಹಾಕಿ ಅನ್ಯಾಯ ಮಾಡುತ್ತಿದೆ. ಹೀಗಾಗಿ ಆ ಸಮುದಾಯವರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂದು ಪ್ರತಿಭಟನಾಕಾರರು ಕಿಡಿ ಕಾರಿದರು.

ಭಾರತೀಯ ಬಂಜಾರ ಕ್ರಾಂತಿ‌‌ದಳದಿಂದ ಪ್ರತಿಭಟನೆ..

ಯಾವುದೇ ಕಾರಣಕ್ಕೂ ಎಸ್‌ಸಿ ಪಟ್ಟಿಯಿಂದ ಲಂಬಾಣಿ, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳನ್ನ ಕೈಬಿಡಬಾರದು ಎಂದು ಪ್ರತಿಭಟನಾಕಾರು ಜಿಲ್ಲಾಧಿಕಾರಿ ಮೂಲಕ‌ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು‌.

ABOUT THE AUTHOR

...view details