ವಿಜಯಪುರ:ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಜನವರಿ 8 ರಂದು ರಾಜ್ಯಾದ್ಯಂತ ಕಾರ್ಮಿಕರ ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಎಸ್.ಎಸ್ ಪ್ರಕಾಶಂ ಹೇಳಿದರು.
ಜ.8 ರಂದು ಕೇಂದ್ರ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ - Protest against condemnation of central anti-labor policy
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಜನವರಿ 8 ರಂದು ರಾಜ್ಯಾದ್ಯಂತ ಕಾರ್ಮಿಕರ ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಎಸ್.ಎಸ್ ಪ್ರಕಾಶಂ ಹೇಳಿದರು.
![ಜ.8 ರಂದು ಕೇಂದ್ರ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ರಾಜ್ಯಾಧ್ಯಕ್ಷ ಎಸ್.ಎಸ್ ಪ್ರಕಾಶಂ](https://etvbharatimages.akamaized.net/etvbharat/prod-images/768-512-5569570-thumbnail-3x2-lekh.jpg)
ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಾರ್ಮಿಕ ವಲಯದ ಭದ್ರತೆಗೆ ಮುಂದಾಗುತ್ತಿಲ್ಲ. ಕಾರ್ಮಿಕ ವಲಯವನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರದ ಮುಂದಾಗಿದೆ. ಈ ಕಾರಣದಿಂದ ಕಾರ್ಮಿಕ ರಂಗದಲ್ಲಿ ಉದ್ಯಮ ಕಡಿತಗೊಳುತ್ತವೆ. ಕೇಂದ್ರ ಸರ್ಕಾರ ಕಾರ್ಮಿಕರ ಸೌಲಭ್ಯವನ್ನು ಕಡಿತ ಮಾಡಿದೆ, ಅಲ್ಲದೆ ಆರ್ಥಿಕ ದಿವಾಳಿತದಿಂದ ಸರ್ಕಾರಿ ವಲಯದ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಲಾಭದಾಯಕ ವಲಯಗಳನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದು ಪ್ರಕಾಶಂ ಆರೋಪಿಸಿದರು.
ಕೇಂದ್ರದ ದುರಾಡಳಿಕ್ಕೆ ಕಾರ್ಮಿಕರು ನಷ್ಟ ಅನುಭವಿಸಬೇಕಾಗಿದೆ, ಹೀಗಾಗಿ ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾದಲ್ಲಿ ಜ. 8 ರಂದು ಧರಣಿ ನಡೆಸಲಿದ್ದೇವೆ. ಮುಷ್ಕರದಲ್ಲಿ ನಾನಾ ಸಂಘ ಸಂಸ್ಥೆಗಳು ಪ್ರತಿಭಟನೆಗೆ ಕೈ ಜೋಡಿಸಲಿದ್ದಾರೆ ಎಂದು ತಿಳಿಸಿದರು.