ವಿಜಯಪುರ: ಜಿಲ್ಲೆಯ ಸವನಹಳ್ಳಿ ಬಳಿಯ ಡೋಣಿ ನದಿಯ ಪ್ರವಾಹದಲ್ಲಿ ಸಿಲುಕಿದ ಇಬ್ಬರು ಯುವಕರನ್ನು ರಕ್ಷಣೆ ಮಾಡಲಾಗಿದೆ.
ಡೋಣಿ ನದಿಯ ಪ್ರವಾಹದಲ್ಲಿ ಸಿಲುಕಿದ ಇಬ್ಬರು ಯುವಕರ ರಕ್ಷಣೆ.. 5 ಗಂಟೆ ಉಸಿರುಬಿಗಿ ಹಿಡಿದಿದ್ದರು.. - Doni River Flood
ಸತತ ಐದೂವರೆ ಗಂಟೆಗಳ ಕಾರ್ಯಾಚರಣೆಯ ಮೂಲಕ ಸವನಹಳ್ಳಿ ಬಳಿಯ ಡೋಣಿ ನದಿಯ ಪ್ರವಾಹದಲ್ಲಿ ಸಿಲುಕಿದ ಇಬ್ಬರು ಯುವಕರನ್ನು ಎನ್ಡಿಆರ್ಎಫ್ ಸಿಬ್ಬಂದಿ ರಕ್ಷಣೆ ಮಾಡಿದೆ.

ಡೋಣಿ ನದಿಯ ಪ್ರವಾಹದಲ್ಲಿ ಸಿಲುಕಿದ ಇಬ್ಬರು ಯುವಕರ ರಕ್ಷಣೆ
ಜಮೀನಿನಲ್ಲಿ ಕೆಲಸ ಮುಗಿಸಿ ಮರಳುವಾಗ ನಡುಗಡ್ಡೆಯಲ್ಲಿ ಯುವಕರು ಸಿಲುಕಿದ್ದರು. ಸತತ ಐದೂವರೆ ಗಂಟೆಗಳ ಕಾರ್ಯಾಚರಣೆಯ ಮೂಲಕ ಸವನಹಳ್ಳಿ ಗ್ರಾಮದ ಚನಬಸಪ್ಪ ಭಾವಿಕಟ್ಟಿ(26), ರಾಹುಲ ರಾಠೋಡ(14) ಎಂಬ ಇಬ್ಬರು ಯುವಕರನ್ನು ರಕ್ಷಣೆ ಮಾಡಲಾಗಿದೆ.ವಿಜಯಪುರ ತಹಶೀಲ್ದಾರ್, ಬಬಲೇಶ್ವರ ಪಿಎಸ್ಐ ಸಮ್ಮುಖದಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ, ಎನ್ಡಿಆರ್ಎಫ್ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ನಡೆಯಿತು.
ವಿಜಯಪುರ ಜಿಲ್ಲೆಯ ಬಬಲೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.