ವಿಜಯಪುರ: ಒಬ್ಬ ಪೊಲೀಸ್ ಅಧಿಕಾರಿಗೆ 6 ತಿಂಗಳ ಹಿಂದೆಯೇ ಐಪಿಎಸ್ ಬಡ್ತಿ ಹೊಂದಬೇಕಾಗಿತ್ತು. ಐಪಿಎಸ್ ಬಡ್ತಿ ನೀಡದೇ ಅವರನ್ನು ಸತಾಯಿಸಲಾಗುತ್ತಿತ್ತು. ಈ ವಿಷಯ ತಿಳಿದು ನಾನು ಫೋನ್ ಮಾಡಿ ಹೇಳಿದ ಮೇಲೆ ಗೃಹ ಸಚಿವರು ತಕ್ಷಣವೇ ಫೈಲ್ ಕ್ಲಿಯರ್ ಮಾಡಿದರು ಎಂದು ಬಸವನಗೌಡ ಪಾಟಿಲ್ ಯತ್ನಾಳ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ನಡೆದ ಪಂಚಮಸಾಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ವಿಷಯ ತಿಳಿಸಿದ್ದಾರೆ. ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಬಹಳ ಜನ ಪ್ರಯತ್ನ ನಡೆಸಿದ್ದರು. ಆದರೆ, ಅದು ಅವರಿಂದ ಸಾಧ್ಯವಾಗಲಿಲ್ಲ ಎಂದು ರಾಜಕೀಯ ವಿರೋಧಿಗಳಿಗೆ ಟಾಂಗ್ ಸಹ ನೀಡಿದರು.