ಕರ್ನಾಟಕ

karnataka

ETV Bharat / state

ಮುದ್ದೇಬಿಹಾಳದಲ್ಲಿ ಹುತಾತ್ಮ ಯೋಧನ ಭಾವಚಿತ್ರದ ಮೆರವಣಿಗೆ - Muddebihala's military martyrdom

ಜಮ್ಮುವಿನಲ್ಲಿ ಕರ್ತವ್ಯದ ವೇಳೆ ಹುತಾತ್ಮರಾದ ಮುದ್ದೇಬಿಹಾಳ ತಾಲೂಕಿನ ಬಸರಕೋಡದ ಯೋಧ ಶಿವಾನಂದ ಬಡಿಗೇರ ಭಾವಚಿತ್ರವನ್ನು ಯುವಕರು ಮೆರವಣಿಗೆ ಮಾಡಿದ್ದಾರೆ.

dsd
ಮುದ್ದೇಬಿಹಾಳದಲ್ಲಿ ಹುತಾತ್ಮ ಯೋಧನ ಭಾವಚಿತ್ರದ ಮೆರವಣಿಗೆ

By

Published : Sep 1, 2020, 12:50 PM IST

ಮುದ್ದೇಬಿಹಾಳ: ಜಮ್ಮುವಿನಲ್ಲಿ ಹುತಾತ್ಮರಾದ ತಾಲೂಕಿನ ಬಸರಕೋಡದ ಯೋಧ ಶಿವಾನಂದ ಬಡಿಗೇರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗಿದೆ.

ಮುದ್ದೇಬಿಹಾಳದಲ್ಲಿ ಹುತಾತ್ಮ ಯೋಧನ ಭಾವಚಿತ್ರದ ಮೆರವಣಿಗೆ

ಗ್ರಾಮದ ಪವಾಡಬಸವೇಶ್ವರ ದೇವಸ್ಥಾನದ ಆವರಣದಿಂದ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಬೈಕ್ ಮೇಲೆ ತೆರಳಿದ ಯುವಕರು, ಶಿವಾನಂದ ಬಡಿಗೇರಗೆ ಜಯವಾಗಲಿ, ವಂದೇ ಮಾತರಂ, ಜೈ ಜವಾನ್ ಜೈ ಕಿಸಾನ್ ಘೋಷಣೆಗಳನ್ನು ಕೂಗಿದ್ದಾರೆ.

ಕತ್ತಲೆಯಲ್ಲೂ ಯುವಕರು ದೇಶಪ್ರೇಮ ಮೆರೆದಿದ್ದು ಜನರ ಮೆಚ್ಚುಗೆಗೆ ಕಾರಣವಾಯಿತು. ಗ್ರಾಮದ ಯುವ ಮುಖಂಡ ಶ್ರೀಶೈಲ ಮೇಟಿ ನೇತೃತ್ವದಲ್ಲಿ ಬೈಕ್ ರ‍್ಯಾಲಿ ನಡೆಸಲಾಯಿತು.

ABOUT THE AUTHOR

...view details