ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ ವಿಫಲ - Pro-Kannada protests in Vijayapura

ಹೋರಾಟಗಾರ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಹಾಗೂ ವಿವಿಧ ಸಂಘಟನೆಗಳು ಇಂದು ವಿಜಯಪುರದಲ್ಲಿ ಪ್ರತಿಭಟನೆ ನಡೆಸಲು ಆಗಮಿಸುತ್ತಿದ್ದರು. ಈ ಪ್ರತಿಭಟನೆ ನಗರದಲ್ಲಿ ಅಶಾಂತಿ ಸೃಷ್ಟಿಸಬಹುದು ಎಂದು ಮೊದಲೇ ಅರಿತ ಪೊಲೀಸರು ವಾಟಾಳ್ ಹಾಗೂ ಅವರ ಟೀಂ ಅನ್ನು ವಿಜಯಪುರಕ್ಕೆ 60 ಕಿ.ಮೀ ಮೊದಲೇ ರಾಷ್ಟ್ರೀಯ ಹೆದ್ದಾರಿ 50ರ ಯಲಗೂರ ಕ್ರಾಸ್ ಬಳಿ ವಶಕ್ಕೆ ಪಡೆದುಕೊಂಡರು.

ಪ್ರತಿಭಟನೆ ವಿಫಲ
ಪ್ರತಿಭಟನೆ ವಿಫಲ

By

Published : Dec 1, 2020, 6:23 PM IST

ವಿಜಯಪುರ:ಮರಾಠಿಗ ಸಮುದಾಯಕ್ಕೆ ಆಯೋಗ ರಚಿಸಿದ ಸರ್ಕಾರದ ನಡೆ ಖಂಡಿಸಿ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿದ್ದ ಕರ್ನಾಟಕ ಬಂದ್​ಗೆ ಆಕ್ರೋಶ ವ್ಯಕ್ತಪಡಿಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧದ ಪ್ರತಿಭಟನೆಯನ್ನು ವಿಜಯಪುರ ಪೊಲೀಸರು ವಿಫಲಗೊಳಿಸಿದ್ದಾರೆ.

ವಿಜಯಪುರದಲ್ಲಿ ಹೇಗೆ ಪ್ರತಿಭಟನೆ, ಬಂದ್ ಮಾಡುತ್ತೀರಿ ನೋಡೋಣ ಎಂದು ಕನ್ನಡ ಪರ ಸಂಘಟನೆಗಳಿಗೆ ಸವಾಲು ಹಾಕಿದ್ದ ಶಾಸಕ ಯತ್ನಾಳ ಪಂಥಾಹ್ವಾನವನ್ನು ಸ್ವೀಕರಿಸಿದ್ದ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಹಾಗೂ ವಿವಿಧ ಸಂಘಟನೆಗಳು ಇಂದು ವಿಜಯಪುರದಲ್ಲಿ ಪ್ರತಿಭಟನೆ ನಡೆಸಲು ಆಗಮಿಸುತ್ತಿದ್ದರು. ಈ ಪ್ರತಿಭಟನೆ ನಗರದಲ್ಲಿ ಅಶಾಂತಿ ಸೃಷ್ಟಿಸಬಹುದು ಎಂದು ಮೊದಲೇ ಅರಿತ ಪೊಲೀಸರು ವಾಟಾಳ್ ಹಾಗೂ ಅವರ ಟೀಂ ಅನ್ನು ವಿಜಯಪುರಕ್ಕೆ 60 ಕಿ.ಮೀ ಮೊದಲೇ ರಾಷ್ಟ್ರೀಯ ಹೆದ್ದಾರಿ 50ರ ಯಲಗೂರ ಕ್ರಾಸ್ ಬಳಿ ವಶಕ್ಕೆ ಪಡೆದುಕೊಂಡರು.

ಕನ್ನಡ ಪರ ಸಂಘಟನೆಗಳ ಪ್ರತಿಭಟನೆ ವಿಫಲ

ವಿಜಯಪುರದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಗುಡುಗಿದ್ದ ಹೋರಾಟಗಾರರ ವಿರುದ್ಧ ರಾಜ್ಯ ಮಾಧ್ಯಮ ಪರಿಷತ್, ಜೈ ಭೀಮ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಯತ್ನಾಳ ಪರ ಬ್ಯಾಟ್ ಬೀಸಿದರು. ಬಂದ್ ನಡೆಸುವುದರಿಂದ ಯಾರಿಗೆ ಲಾಭವಾಗುತ್ತೆ? ಎಂದು ಪ್ರಶ್ನಿಸಿದರು. ಇಂಥಹ ನಕಲಿ ಹೋರಾಟಗಾರರನ್ನು ವಿಜಯಪುರ ನಗರಕ್ಕೆ ಬರದಂತೆ ಶಾಶ್ವತ ನಿಷೇಧ ಹೇರಬೇಕೆಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕನ್ನಡ ಪರ ಸಂಘಟನೆಗಳ ನಡುವಿನ ಹೋರಾಟ ಸದ್ಯ ತಾತ್ಕಾಲಿಕವಾಗಿ ತಣ್ಣಗಾಗಿದೆ. ಡಿಸೆಂಬರ್ 5ರಂದು ಕರ್ನಾಟಕ ಬಂದ್​ ವಿಜಯಪುರದಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಕಾದು ನೋಡಬೇಕಾಗಿದೆ.

ABOUT THE AUTHOR

...view details