ಕರ್ನಾಟಕ

karnataka

ETV Bharat / state

’ಆರ್​ಟಿಇ ಬಾಕಿ ಮೊತ್ತ ಪಾವತಿಸಿ’:  ಇಲ್ಲದಿದ್ದರೇ ಪತ್ನಿ ಮಾಂಗಲ್ಯ ಅಡ ಇಡಬೇಕಾಗುತ್ತೆ!! - muddebihala latest news

ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಆರ್​ಟಿಇ ಹಣ ಪಾವತಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಯಿತು.

wrote a letter to CM
ಆರ್​ಟಿಇ ಬಾಕಿ ಮೊತ್ತ ಪಾವತಿಸಿ

By

Published : May 2, 2020, 4:43 PM IST

ಮುದ್ದೇಬಿಹಾಳ : ಮಾರ್ಚ್​ 30 ರ ಒಳಗೆ ಬರಬೇಕಾಗಿದ್ದ ಶೇ.25% ಹಣ ಇನ್ನೂ ಬಂದಿಲ್ಲ, ಇದರಿಂದ ಖಾಸಗಿ ಶಾಲೆಗಳು ಸಂಕಷ್ಟಕ್ಕೀಡಾಗಿವೆ ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ಮಖ್ಯಮಂತ್ರಿಗಳಿಗೆ ಜಿಲ್ಲಾ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಗಿದೆ.

ಆರ್​ಟಿಇ ಬಾಕಿ ಮೊತ್ತ ಪಾವತಿಸಿ

ತಾಲೂಕಿನಲ್ಲಿ ಖಾಸಗಿ ಶಾಲೆಗಳಿಗೆ ಆರ್​ಟಿಇ ಬಾಕಿ ಹಣ ಬಾರದಿರುವುದರಿಂದ ತೊಂದರೆಯಾಗಿದೆ. ವಿಶೇಷವಾಗಿ ಎಲ್ಲ ಶಿಕ್ಷಕರಿಗೆ ವೇತನ ನೀಡಲೇಬೇಕು ಎಂದು ಸಿಎಂ ಆದೇಶಿಸಿರುವುದು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದಂತಾಗಿದೆ. ವೇತನ ಕೊಡಬೇಕಾದರೆ ಹೆಂಡತಿಯ ಮಾಂಗಲ್ಯ ಮಾರುವ ದುಃಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿಗಳು ಖಾಸಗಿ ಶಾಲೆಗಳಿಗೆ ಕೊಡಬೇಕಿರುವ ಹಣವನ್ನು ಕೂಡಲೇ ಬಿಡುಗಡೆಗೊಳಿಸಿದರೆ, ಶಿಕ್ಷಕರ ಬಾಕಿ ವೇತನ ಪಾವತಿಸಲು ಸಾಧ್ಯವಾಗಲಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಕೊಪ್ಪ ತಿಳಿಸಿದ್ದಾರೆ.

ABOUT THE AUTHOR

...view details