ವಿಜಯಪುರ: ಈ ಬಾರಿ ಕೊರೊನಾ ವೈರಸ್ ದಾಳಿ ಹಾಗೂ ಜಿಲ್ಲೆಯಲ್ಲಿ ಭೀಕರ ಪ್ರವಾಹದ ಪರಿಣಾಮ, ನವರಾತ್ರಿ ಹಬ್ಬದ ವೇಳೆ ಅಗತ್ಯ ಸಾಮಗ್ರಿಗಗಳ ಬೆಲೆ ಗಗನಕ್ಕೇರಿದೆ.
ವಿಜಯಪುರದಲ್ಲಿ ಗಗನಕ್ಕೇರಿದ ಅಗತ್ಯ ಸಾಮಗ್ರಿಗಳ ಬೆಲೆ ಜಿಲ್ಲಾಡಳಿತ ಈ ಬಾರಿ ಹಬ್ಬ ಸರಳವಾಗಿ ಆಚರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಸರಳವಾಗಿ ಹಬ್ಬ ಮಾಡೋಣ ಅಂದುಕೊಂಡು ಜನ್ರು ಸಾಮಗ್ರಿಗಳ ಖರೀದಿ ಬಂದ್ರೆ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಿದಂತಾಗಿದೆ. ಉತ್ತರ ಕರ್ನಾಟಕದಲ್ಲಿ ಸುರಿದ ಮಳೆಗೆ ಹೂವು ತರಕಾರಿ ಸೇರಿದಂತೆ ಹಲವು ಸಾಮಗ್ರಿಗಳ ಬೆಲೆ ಕಳೆದ ವಾರದಿಂದ ದುಬಾರಿಯಾಗಿರುವುದಕ್ಕೆ ನಗರ ನಿವಾಸಿಗಳು ಸದ್ಯ ಹಿಂದೂಮುಂದು ನೋಡುವಂತಾಗಿದೆ.
ಇನ್ನು ಈ ಬಾರಿ ಪ್ರವಾಹಕ್ಕೆ ರೈತರ ಬೆಳೆ ನಾಶವಾದ ಪರಿಣಾಮ ಮಾರುಕಟ್ಟೆಯಲ್ಲಿ ಕಬ್ಬು, ಜೋಡಿ ಬಾಳೆಗಿಡಕ್ಕೆ 120ರೂ, ಕೆಜಿ ಚಂಡು ಹೂ ಗೆ 170 ರೂ.ರಿಂದ 200ರೂ, ಬಾಳೆಹಣ್ಣಿನ ಬೆಲೆ ಸ್ಥಿರವಾಗಿದ್ರೆ, ಎಲೆ, ಪೇರುಹಣ್ಣು, 130 ರೂ., ಸೇಬು 160 ರೂ.ಸೇರಿದಂತೆ ಹಲವು ಹಣ್ಣಿನ ಬೆಲೆ ಏರಿಕೆಯಾಗಿವೆ.
ಬೆಳಗಾವಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಭಾಗದಿಂದ ಜಿಲ್ಲೆಗೆ ಬರುತ್ತಿದ್ದ ತರಕಾರಿ ಆಮದಿನ ಪ್ರಮಾಣದಲ್ಲಿ ಕುಂಠಿತ ಕಂಡ ಕಾರಣದಿಂದ, ಹಬ್ಬಕ್ಕೆ ಬೇಕಾದ ಬದನೆಕಾಯಿ ಕೆ.ಜೆ 110 ರೂ. ಹೀರೆಕಾಯಿ 80 ರೂ. ಕುಂಬಳಕಾಯಿ ಗಾತ್ರದ ಆಕಾರದ ಮೇಲೆ 50ರೂ.ಗಳಿಂದ 80 ರೂ. ತಲಾ ಸುಡಿಗೆ ಕೊತ್ತಂಬರಿ ಸೊಪ್ಪು10 ರೂ., ಈರುಳ್ಳಿ 70ರೂ ಕೆಜೆಗೆ ಬೆಲೆಗಳು ದುಬಾರಿಯಾಗುವುದಕ್ಕೆ ಜನ್ರು ಖರೀದಿ ಮಾಡ್ಬೇಕಾ ಬೇಡವಾ ಎಂಬ ಚಿಂತೆ ಮಾಡುವಂತಾಗಿದೆ.
ಪ್ರವಾಹಕ್ಕೆ ಹೂ ಸೇರಿದಂತೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳು ಹಾಳಾಗಿರೋದರಿಂದ ಬೆಲೆಯಲ್ಲಿ ಏರಿಕೆ ಕಂಡಿದೆ. ನಮ್ಮಗೂ ಕೂಡ ಗ್ರಾಹಕರಿಗೆ ಹೆಚ್ಚಿನ ಬೆಲೆ ಹೇಳಲಾಗುತ್ತಿಲ್ಲ ಆದ್ರೂ ಮಾರುಕಟ್ಟೆ ಹೆಚ್ಚಿನ ಪ್ರಮಾಣದಲ್ಲಿ ಹೂವು ಬರ್ತಿಲ್ಲ. ಹೀಗಾಗಿ ದುಬಾರಿ ಬೆಲೆ ಕೊಟ್ಟು ರೈತರಿಂದ ಖರೀದಿಸಿ ಮಾರುಕಟ್ಟೆ ತರುತ್ತಿದ್ದೇವೆ ವೆಚ್ಚವೂ ದುಬಾರಿಯಾಗಿದೆ. ಹೀಗಾಗಿ ಬೆಲೆ ದುಬಾರಿಯಾಗಿದೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು.
ಒಟ್ಟಾರೆಯಾಗಿ ನವರಾತ್ರಿ ಹಬ್ಬದ ಸಂತಸ ಒಂದೆಡೆ, ಕಡಿಮೆ ಖರ್ಚಿನಲ್ಲಿ ಸರಳವಾಗಿ ಹಬ್ಬ ಮಾಡೋಣ ಅಂದುಕೊಂಡ ನಗರ ನಿವಾಸಿಗಳಿಗೆ ಪ್ರವಾಹದ ಪರಿಣಾಮ ಅಗತ್ಯ ಸಾಮಗ್ರಿಗಳ ಬೆಲೆ ಹೆಚ್ಚಾಗಿರೋದು ಕಳವಳಕ್ಕೆ ಕಾರಣವಾಗಿದೆ.