ಕರ್ನಾಟಕ

karnataka

ETV Bharat / state

ಡೇಟಾ ಎಂಟ್ರಿ ಆಪರೇಟರ್‌ಗಳ ಅನುಮೋದನೆಗೆ ಸರ್ಕಾರದ ಮೇಲೆ ಒತ್ತಡ: ಭೀಮಾರೆಡ್ಡಿ ಪೊಲೀಸಪಾಟೀಲ - Data entry operators

ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಉದ್ಯೋಗ ಭದ್ರತೆ ಒದಗಿಸುವುದು, ನೈತಿಕ ಹಾಗೂ ಮಾನಸಿಕ ಸ್ಥೈರ್ಯವನ್ನು ನೀಡುವ ಕಾರ್ಯ ಗ್ರಾ. ಪಂ. ನೌಕರರ ಸಮಿತಿ ಮಾಡಲಿದೆ ಎಂದು ಕರ್ನಾಟಕ ಗ್ರಾ. ಪಂ. ನೌಕರರ ಸಮಿತಿ ಕ್ಲರ್ಕ್​ ಕಂ ಡಾಟಾ ಎಂಟ್ರಿ ಆಪರೇಟರ್ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಭೀಮಾರೆಡ್ಡಿ ಪೊಲೀಸಪಾಟೀಲ ಹೇಳಿದರು.

Pressure on the government to approve data entry operators
ಡಾಟಾ ಎಂಟ್ರಿ ಆಪರೇಟರ್‌ಗಳ ಅನುಮೋದನೆಗೆ ಸರ್ಕಾರದ ಮೇಲೆ ಒತ್ತಡ

By

Published : Aug 3, 2020, 3:40 PM IST

ಮುದ್ದೇಬಿಹಾಳ(ವಿಜಯಪುರ):ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಉದ್ಯೋಗ ಭದ್ರತೆ ಒದಗಿಸುವುದು, ನೈತಿಕ ಹಾಗೂ ಮಾನಸಿಕ ಸ್ಥೈರ್ಯವನ್ನು ತುಂಬುವ ಕಾರ್ಯವನ್ನು ಗ್ರಾ. ಪಂ. ನೌಕರರ ಸಮಿತಿ ಮಾಡಲಿದೆ ಎಂದು ಕರ್ನಾಟಕ ಗ್ರಾ. ಪಂ. ನೌಕರರ ಸಮಿತಿ ಕ್ಲರ್ಕ್​ ಕಂ ಡಾಟಾ ಎಂಟ್ರಿ ಆಪರೇಟರ್ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಭೀಮಾರೆಡ್ಡಿ ಪೊಲೀಸಪಾಟೀಲ ಅಭಯ ನೀಡಿದರು.

ಡೇಟಾ ಎಂಟ್ರಿ ಆಪರೇಟರ್‌ಗಳ ಅನುಮೋದನೆಗೆ ಸರ್ಕಾರದ ಮೇಲೆ ಒತ್ತಡ

ತಾಲೂಕು ಪಂಚಾಯತ್​ ಸಭಾಭವನದಲ್ಲಿ ನೂತನವಾಗಿ ಗ್ರಾ. ಪಂ. ನೌಕರರ ರಾಜ್ಯ ಸಮಿತಿಗೆ ಆಯ್ಕೆಯಾದ ರಾಜ್ಯ ಪದಾಧಿಕಾರಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅನುಮೋದನೆಗೊಳ್ಳದ ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಸರ್ಕಾರ ತಕ್ಷಣ ಅನುಮೋದನೆ ನೀಡಬೇಕು. ತಾಲೂಕಾವಾರು ವರ್ಗಾವಣೆಯ ಸೇವಾ ನಿಯಮಾವಳಿ ರೂಪಿಸಬೇಕು. ಹಿಂದಿನ ಸೇವಾ ಅವಧಿಯನ್ನು ಪರಿಗಣಿಸಿ ಬಡ್ತಿ ನೀಡಬೇಕು. ಡಿಇಓಗಳನ್ನೂ ಕೊರೊನಾ ವಾರಿಯರ್ಸ್​ ಎಂದು ಘೋಷಿಸಿ 50 ಲಕ್ಷ ರೂ. ವಿಮೆ ವ್ಯಾಪ್ತಿಗೆ ಒಳಪಡಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ತಾಲೂಕು ಸಂಘದ ಗೌರವ ಅಧ್ಯಕ್ಷ ವೆಂಕಟೇಶ ಭಜಂತ್ರಿ ಮಾತನಾಡಿ, ಸಂಘಟನೆಯಲ್ಲಿ ಬಲವಿದ್ದರೆ ಸರ್ಕಾರವನ್ನು ಬಗ್ಗಿಸಬಹುದು. ನಮ್ಮಲ್ಲಿ ಸಂಘಟನೆಯ ಕೊರತೆ ಇರುವುದರಿಂದಲೇ ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಸಂಬಂಧಿಸಿದಂತೆ ನಿಶ್ಚಿತ ಆದೇಶವನ್ನು ಸರ್ಕಾರ ಹೊರಡಿಸುತ್ತಿಲ್ಲ. ಐಎಎಸ್ ಅಧಿಕಾರಿಗಳನ್ನು ತಡೆದು ನಿಲ್ಲಿಸಿ ಕೇಳುವ ಧೈರ್ಯ ಸಂಘಟನೆಯಲ್ಲಿ ಬರಬೇಕು ಎಂದರು.

ಸಿಂಧಗಿ-ದೇವರಹಿಪ್ಪರಗಿ ತಾಲೂಕಿನ ಅಧ್ಯಕ್ಷ ಆರ್. ಕೆ. ದೇಶಪಾಂಡೆ ಮಾತನಾಡಿ, ಡಾಟಾ ಎಂಟ್ರಿ ಆಪರೇಟರ್‌ಗಳು ಆಶಾ ಕಾರ್ಯಕರ್ತೆಯರಿಗಿಂತಲೂ ಹೀನಾಯ ಪರಿಸ್ಥಿತಿಯಲ್ಲಿದ್ದಾರೆ. ನಮಗೆ ರಜೆ ಎಂಬುದೇ ಇಲ್ಲ. ಶ್ರಮಿಸಿ ದುಡಿದರೂ ಅದಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದರು.

ABOUT THE AUTHOR

...view details