ಕಳೆದ ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಧಾರಾಕಾರ ಮಳೆಯಾಗಿ ನದಿ, ಹಳ್ಳ - ಕೊಳ್ಳ, ಜಲಾಶಯಗಳಲ್ಲಿ ಅಧಿಕ ಪ್ರಮಾಣದ ನೀರು ಸಂಗ್ರಹವಾಗಿದೆ. ನಿರಂತರವಾಗಿ ಸುರಿಯುತ್ತಿದ್ದ ಮಳೆ ಈ ವಾರ ಕೊಂಚ ಬಿಡುವು ನೀಡಿತ್ತು. ಇದೀಗ ಮತ್ತೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜಲಾಶಯಗಳಲ್ಲಿ ಸದ್ಯ ಒಳಹರಿವು ಕಡಿಮೆಯಾಗಿದೆ, ಹೊರ ಹರಿವು ಕೂಡಾ ಕಡಿಮೆ ಮಾಡಲಾಗಿದೆ. ಇಂದು ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ ನೋಡಿ..
ಕಬಿನಿ ಜಲಾಶಯ
- ಗರಿಷ್ಠ ಮಟ್ಟ:2,284 ಅಡಿ
- ಇಂದಿನ ಮಟ್ಟ: 2,283.66 ಅಡಿ
- ಒಳ ಹರಿವು: 5,746 ಕ್ಯೂಸೆಕ್
- ಹೊರ ಹರಿವು: 5,000 ಕ್ಯೂಸೆಕ್
ಆಲಮಟ್ಟಿ ಜಲಾಶಯ
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ಮಟ್ಟ: 518.45 ಮೀಟರ್
- ಒಳಹರಿವು: 27,154 ಕ್ಯೂಸೆಕ್
- ಹೊರಹರಿವು: 18,451 ಕ್ಯೂಸೆಕ್
- ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ:123.08 ಟಿಎಂಸಿ
- ಇಂದಿನ ನೀರಿನ ಸಂಗ್ರಹ: 104.368 ಟಿಎಂಸಿ
ಭದ್ರಾ ಜಲಾಶಯ
- ಗರಿಷ್ಠ ಮಟ್ಟ : 186 ಅಡಿ
- ಇಂದಿನ ಮಟ್ಟ:184.1 ಅಡಿ
- ಒಳಹರಿವು: 12,358 ಕ್ಯೂಸೆಕ್
- ಹೊರಹರಿವು: 18,353 ಕ್ಯೂಸೆಕ್
- ನೀರು ಸಂಗ್ರಹ: 69.139 ಟಿಎಂಸಿ
- ಸಾಮರ್ಥ್ಯ:71.535 ಟಿಎಂಸಿ
- ಕಳೆದ ವರ್ಷ ಈ ದಿನದ ನೀರು ಸಂಗ್ರಹ 181 ಅಡಿ