ವಿಜಯಪುರ: ಕೊರೊನಾ ರೋಗಿಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳನ್ನು ಸಹ ಕೊವಿಡ್ ಕೇಂದ್ರವಾಗಿ ಪರಿವರ್ತಿಸಿದ ಕಾರಣ ಸಾಮಾನ್ಯ ರೋಗಿಗಳು ಹಾಗೂ ಗರ್ಭಿಣಿಯರು ಹೆಚ್ಚಿನ ಹಣ ನೀಡಿ ಡೆಲಿವರಿ ಮಾಡಿಸಿಕೊಳ್ಳಬೇಕಾದ ಸನ್ನಿವೇಶ ಎದುರಾಗಿದೆ.
ಕೊವಿಡ್ ಗದ್ದಲದಲ್ಲಿ ಗರ್ಭಿಣಿಯರ ಪಾಡು ಹೇಳತೀರದು! - pregnant women problems in vijaypur
ವಿಜಯಪುರ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಕೇಂದ್ರವಾಗಿ ಮಾಡಿದ ಹಿನ್ನೆಲೆ ಈ ಆಸ್ಪತ್ರೆ ಪಕ್ಕದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೇವಲ ಹೆರಿಗೆ ಕೇಂದ್ರವಾಗಿ ಪರಿವರ್ತಿಸಿದೆ. ಇದ್ರಿಂದಾಗಿ ಹೆರಿಗೆಗಾಗಿ ಗರ್ಭಿಣಿಯರು ಖಾಸಗಿ ಆಸ್ಪತ್ರೆಗಳಿಗೆ ತರಳಿ ದುಬಾರಿ ಹಣ ತೆರಬೇಕಾದ ಸಂಕಷ್ಟ ಎದುರಾಗಿದೆ.
ಜಿಲ್ಲಾಸ್ಪತ್ರೆಯಲ್ಲಿಯೂ ಹೆರಿಗೆ ಮಾಡಿಸುವ ತಜ್ಞ ವೈದ್ಯರಿಗೂ ಕೊರೊನಾ ಸೋಂಕು ಕಾಣಿಸಿಕೊಂಡ ಮೇಲೆ ಗರ್ಭಿಣಿಯರು ಮತ್ತೆ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ. ಮೂಲಗಳ ಪ್ರಕಾರ ಖಾಸಗಿ ಆಸ್ಪತ್ರೆಯಲ್ಲಿ ಒಂದು ಹೆರಿಗೆಗೆ 40-50 ಸಾವಿರ ಶುಲ್ಕ ನಿಗದಿ ಪಡಿಸಲಾಗಿದೆ. ಅದರಲ್ಲಿ ಪಿಪಿಇ ಕಿಟ್, ಗ್ಲೌಸ್, ಸ್ಯಾನಿಟೈಜರ್ ,ಎನ್ - 95 ಮಾಸ್ಕ್ ಬೆಲೆ ಸಹ ಒಳಗೊಂಡಿದೆ. ಆದರೆ ಕೆಲ ಆಸ್ಪತ್ರೆಗಳು ಮಾತ್ರ ಕೊರೊನಾ ಬರುವ ಮುನ್ನ ಇದ್ದ ಶುಲ್ಕವನ್ನೇ ಪಡೆಯುತ್ತಿವೆ. ಹೆಚ್ಚುವರಿಯಾಗಿ ಪಿಪಿಇ ಕಿಟ್ ಸೇರಿ ಬೇರೆ ಉಪಕರಣಗಳನ್ನು ಒದಗಿಸುತ್ತಿವೆ.
ವೈರಸ್ ಹಬ್ಬಿದ ಮೇಲೆ ಆಸ್ಪತ್ರೆಗಳ ಸ್ವಚ್ಛತಾ ಶೈಲಿಗಳು ಸಹ ಬದಲಾಗಿವೆ. ರೋಗಿ ಹಾಗೂ ವೈದ್ಯರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿವೆಯಾದರೂ ಶುಲ್ಕ ಹೆಚ್ಚಳ ಮಾಡಿವೆ. ಇದನ್ನು ಯಾವ ಆಸ್ಪತ್ರೆಯ ವೈದ್ಯರು ಒಪ್ಪಿಕೊಳ್ಳುತ್ತಿಲ್ಲ.