ವಿಜಯಪುರ:ಬಸ್ಗಾಗಿ ಕಾಯುತ್ತಿದ್ದ ಗರ್ಭಿಣಿಗೆ ಬಸ್ ನಿಲ್ದಾಣದಲ್ಲಿಯೇ ಹೆರಿಗೆಯಾದ ಘಟನೆ ಜಿಲ್ಲೆಯ ನಿಡಗುಂದಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ.
ಬಸ್ ನಿಲ್ದಾಣದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ.! - ವಿಜಯಪುರದಲ್ಲಿ ಬಸ್ಸ್ಟ್ಯಾಂಡ್ನಲ್ಲೇ ಗರ್ಭಿಣಿಗೆ ಹೆರಿಗೆ ಸುದ್ದಿ
ಬಸ್ಗಾಗಿ ಕಾಯುತ್ತಿದ್ದ ಗರ್ಭಿಣಿಗೆ ಬಸ್ ನಿಲ್ದಾಣದಲ್ಲಿಯೇ ಹೆರಿಗೆಯಾದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.

ಬಸ್ ನಿಲ್ದಾಣದಲ್ಲೇ ಗರ್ಭಿಣಿಗೆ ಹೆರಿಗೆ!
ಬಸವನಬಾಗೇವಾಡಿಯ ಪಟ್ಟಣದ ಮಹಾದೇವಿ ಹಣಮಂತ ವಡ್ಡರ ಎಂಬುವವರಿಗೆ ಬಸ್ ನಿಲ್ದಾಣದಲ್ಲೇ ಹೆಣ್ಣು ಮಗು ಜನನವಾಗಿದೆ. ಸುಮಾರು ಒಂದು ಗಂಟೆಯಿಂದ ನಿಡಗುಂದಿಯ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯ್ದಿದ್ದ ಮಹಾದೇವಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಸ್ಥಳೀಯರ ಸಹಾಯದಿಂದ ಸುಸೂತ್ರವಾಗಿ ಹೆರಿಗೆಯಾಗಿದೆ.
ಬಸ್ ನಿಲ್ದಾಣದಲ್ಲೇ ಗರ್ಭಿಣಿಗೆ ಹೆರಿಗೆ!
ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ತೆರಳುವ ಬಸ್ಗಾಗಿ ಕಾಯುವ ವೇಳೆ ಘಟನೆ ನಡೆದಿದೆ. ಹೆರಿಗೆ ಬಳಿಕ ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಾಯಿ ಮಗು ರವಾನೆ ಮಾಡಲಾಗಿದೆ. ತಾಯಿ-ಮಗು ಆರೋಗ್ಯ ಸ್ಥಿರವಾಗಿದೆ.
Last Updated : Jan 1, 2020, 5:52 PM IST