ಕರ್ನಾಟಕ

karnataka

ETV Bharat / state

ವಿಜಯಪುರ: ಕೊರೊನಾ ತೊಲಗಿಸಲು ಆಹಾರ ತ್ಯಜಿಸಿ ಅನುಷ್ಠಾನಕ್ಕೆ ಕುಳಿತ ಅರ್ಚಕ! - ವಿಜಯಪುರದಲ್ಲಿ ಕೊರೊನಾ ಸೋಂಕು ತಡೆಗೆ ಪ್ರಾರ್ಥನೆ

ವಿಜಯಪುರದ ಜಾಡರ ಬಡಾವಣೆಯ ಶ್ರೀಶೈಲ ಮಲ್ಲಿಕಾರ್ಜುನ ಮಂದಿರದ ಅರ್ಚಕ ರಾಚಯ್ಯ ಹಿರೇಮಠ ಆಹಾರ ತ್ಯಜಿಸಿ ಅನುಷ್ಠಾನಕ್ಕೆ ಕುಳಿತಿದ್ದಾರೆ. ದೇಶದಿಂದ ಕೊರೊನಾ ಮುಕ್ತವಾಗಲಿ ಎಂಬುದು ಅರ್ಚಕರ ಉದ್ದೇಶವಾಗಿದೆ.

Pray in God to get rid of Corona
ದೇವರ ಮೊರೆ ಹೋದ ಅರ್ಚಕ

By

Published : Apr 18, 2020, 4:43 PM IST

ವಿಜಯಪುರ: ದೇಶದಲ್ಲಿ ಕೊರೊನಾ ಸೋಂಕು ಹೋಗಲಾಡಿಸಲು ಅರ್ಚಕರೊಬ್ಬರು ದೇಗುಲದಲ್ಲಿ ಅನುಷ್ಠಾನಕ್ಕೆ ಕುಳಿತಿದ್ದಾರೆ.

ದೇವರ ಮೊರೆ ಹೋದ ಅರ್ಚಕ

ನಗರದ ಜಾಡರ ಬಡಾವಣೆಯ ಶ್ರೀಶೈಲ ಮಲ್ಲಿಕಾರ್ಜುನ ಮಂದಿರದಲ್ಲಿ ಅರ್ಚಕ ರಾಚಯ್ಯ ಹಿರೇಮಠ ಎಂಬುವವರು ಕಳೆದ 30 ಗಂಟೆಗಳಿಂದ ಆಹಾರ ತ್ಯಜಿಸಿ ಅನುಷ್ಠಾನಕ್ಕೆ ಕುಳಿತಿದ್ದಾರೆ.

ಮನುಕುಲವನ್ನು ಅಪಾಯದ ಅಂಚಿಗೆ ತಂದಿರುವ ಕೊರೊನಾ ತೊಲಗಲಿ ಎಂಬುದು ಅರ್ಚಕರ ಉದ್ದೇಶವಾಗಿದೆ. ಮಹಾ ಮೃತ್ಯುಂಜಯ ಮಂತ್ರ, ಓಂ ನಮಃ ಶಿವಾಯ ಮಂತ್ರಗಳ ಪಠಣೆ ಮಾಡುತ್ತಾ ಕೊರೊನಾ ವಿರುದ್ಧ ಧಾರ್ಮಿಕ ಸಮರ ಸಾರಿದ್ದಾರೆ.

ಈ ದೇವಾಲಯಕ್ಕೆ 12ನೇ ಶತಮಾನದ ಇತಿಹಾಸವಿದೆ. ಸದ್ಯ ದೇವಾಲಯ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿಷೇಧವಿದೆ. ನಿನ್ನೆಯಿಂದ ಅನುಷ್ಠಾನಕ್ಕೆ ಕುಳಿತಿದ್ದು, ನೀರು ಮಾತ್ರ ಸೇವಿಸುತ್ತಿದ್ದಾರೆ.

ABOUT THE AUTHOR

...view details