ವಿಜಯಪುರ :ಎಸ್‌ಡಿಪಿಐ ಮತ್ತು ಪಿಎಫ್‌ಐ ಬಿಜೆಪಿಯ ಬಿ ಟೀಂ ಎಂಬ ವಿರೋಧ ಪಕ್ಷಗಳ ಆರೋಪ ನೂರಕ್ಕೆ ನೂರು ಸತ್ಯವಾಗಿದೆ. ಬಿಜೆಪಿಗೆ ದೇಶದ ಮತ್ತು ಹಿಂದೂ ಕಾರ್ಯಕರ್ತರ ಸುರಕ್ಷತೆ ಬೇಕಿಲ್ಲ, ಅಧಿಕಾರ ಒಂದೇ ಬಿಜೆಪಿಗೆ ಮುಖ್ಯವಾಗಿದೆ. ರಾಜ್ಯದ ಸಂಸದರು, ಶಾಸಕರು ಎಸ್‌ಡಿಪಿಐ ಹಾಗೂ ಪಿಎಫ್‌ಐ ಬ್ಯಾನ್ ಮಾಡುವಂತೆ ಕೇಂದ್ರಕ್ಕೆ ಹೋಗಿ ಮನವಿ ಸಲ್ಲಿಸಿದ್ದರು, ಈಗ ಕೇಂದ್ರ ಮತ್ತು ರಾಜ್ಯದಲ್ಲಿ ತಮ್ಮದೇ ಸರ್ಕಾರವಿದ್ದರೂ ಬಾಯಿ ಮುಚ್ಚಿಕೊಂಡು ಕೂತಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದರು.
ಇತ್ತೀಚಿಗೆ ಬಾಗಲಕೋಟೆ ಜಿಲ್ಲೆಯಲ್ಲಿ ಕೋಮು ಗಲಭೆಯಲ್ಲಿ ಬಂಧನಕ್ಕೆ ಒಳಗಾಗಿ ನಗರದ ದರ್ಗಾ ಜೈಲಿನಲ್ಲಿರುವ 13 ಹಿಂದೂ ಕಾರ್ಯಕರ್ತರನ್ನು ಭೇಟಿಯಾಗಿ ಧೈರ್ಯ ತುಂಬಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್‌ನವರು ಏನು ಮಾಡಿದ್ದಾರೆ ಎಂಬುದು ರಮೇಶ ಕುಮಾರ ಬಾಯಿ ಮೂಲಕ ಹೊರಬಂದಿದೆ. ನೆಹರು ಮನೆತನದ ಮೂಲಕ ದೇಶವನ್ನು ಈವರೆಗೂ ಲೂಟಿ ಮಾಡಿದ್ದಾರೆ. ಇದನ್ನು ತಡೆಯುವ ಶಕ್ತಿ ಪ್ರಧಾನಿ ಮೋದಿ ಹಾಗೂ ಯೋಗಿ ಅವರಿಗೆ ಬರಲಿ ಎಂದು ವಿನಂತಿಸುವೆ ಎಂದರು.