ವಿಜಯಪುರ : ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದಿಂದ ನೀಡುವ ಬಸವ ಕೃಷಿ ಪ್ರಶಸ್ತಿಗೆ ತೆಲಂಗಾಣ ಸರ್ಕಾರದ ಜಲಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶ ವೀರಮಲ್ಲ ಭಾಜನರಾಗಿದ್ದಾರೆ ಎಂದರು ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಟಿಆರ್ಎಸ್ ಪಕ್ಷದ ಜಲ ಸಂಪನ್ಮೂಲ ಕೋಶದ ಕನ್ವೀನರ್ ಆಗಿದ್ದಾಗ ಪಕ್ಷದ ಪ್ರನಾಳಿಕೆ ರೂಪಿಸುವುದರ ಜೊತೆಗೆ ನೀರಾವರಿ ವಿಷಯಗಳ ಕುರಿತು ಸರ್ಕಾರದ ಪ್ರತಿನಿಧಿಗಳ ಜೊತೆ ಚರ್ಚೆ ಮಾಡುವ ಕೆಲಸ ಮಾಡಿದ್ದಾರೆ.