ಮುದ್ದೇಬಿಹಾಳ : ಮತಕ್ಷೇತ್ರದ ತಾಳಿಕೋಟೆ ನಗರ ಘಟಕದ ಜೆಡಿಎಸ್ ಪಕ್ಷದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ನಗರ ಘಟಕದ ಅಧ್ಯಕ್ಷರನ್ನಾಗಿ ಪ್ರಲ್ಹಾದ್ ಸಿಂಗ್ ಹಜೇರಿ ಅವರನ್ನು ಆಯ್ಕೆ ಮಾಡಲಾಯ್ತು.
ತಾಳಿಕೋಟಿ : ನಗರ ಜೆಡಿಎಸ್ ಪದಾಧಿಕಾರಿಗಳ ನೇಮಕ - prahlad singh hajeri news
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಮತಕ್ಷೇತ್ರದ ತಾಳಿಕೋಟೆ ನಗರ ಘಟಕದ ಅಧ್ಯಕ್ಷರನ್ನಾಗಿ ಪ್ರಲ್ಹಾದ್ ಸಿಂಗ್ ಹಜೇರಿ ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷರನ್ನಾಗಿ ಶರಣಗೌಡ ಪಾಟೀಲ, ರಜಾಕಸಾಬ ಮಮದಾಪೂರ, ಪ್ರಧಾನ ಕಾರ್ಯದರ್ಶಿಯನ್ನಾಗಿ ಕಾಶಿನಾಥ ಪರಂಪೂರ, ಸಹ ಕಾರ್ಯದರ್ಶಿಯನ್ನಾಗಿ ವಿಠ್ಠಲಸಿಂಗ್ ಎ. ಹಜೇರಿ, ಕಾನೂನು ಸಲಹೆಗಾರರನ್ನಾಗಿ ನ್ಯಾಯವಾದಿ ಜಾಕೀರ ಖಾಲೆಸಾಬ ಚಿತ್ತರಗಿ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರನ್ನಾಗಿ ಶಮಶುದ್ದೀನ್ ನಾಲಬಂದ ನೇಮಕಗೊಂಡ್ರು.
ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಪುರಸಭಾ ಸದಸ್ಯೆ ಶ್ರೀಮತಿ ಸೈದಾಬಿ ಚಿತ್ತರಗಿ, ಯುವ ಘಟಕದ ಅಧ್ಯಕ್ಷರನ್ನಾಗಿ ಆರೀಫ ಮಣಿಯಾರ, ಮುದ್ದೇಬಿಹಾಳ ತಾಲೂಕಾ ಕಾರ್ಯದರ್ಶಿಯನ್ನಾಗಿ ನದೀಂ ಕಡು ಅವರನ್ನು ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಮತಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಪ್ರಭುಗೌಡ ಪಾಟೀಲ ಅವರು ಆಯ್ಕೆಗೊಳಿಸಿ ಆದೇಶಿಸಿದ್ದಾರೆ. ಈ ವೇಳೆ ಜೆಡಿಎಸ್ ರಾಜ್ಯ ನಾಯಕಿ ಮಂಗಳಾದೇವಿ ಬಿರಾದಾರ ಇದ್ದರು.