ವಿಜಯಪುರ :ಕಳೆದ ರಾತ್ರಿ (ಗುರುವಾರ) ಆಲಮೇಲ ಪಟ್ಟಣದಲ್ಲಿ ರೌಡಿಶೀಟರ್ ಹಾಗೂ ಪಟ್ಟಣ ಪಂಚಾಯತ್‌ನ ಮಾಜಿ ಸದಸ್ಯ ಪ್ರದೀಪ ಎಂಟಮಾನ ಬರ್ಬರ್ ಹತ್ಯೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಆನಂದಕುಮಾರ ತಿಳಿಸಿದ್ದಾರೆ.
ಪ್ರದೀಪ ಎಂಟಮಾನ ಹತ್ಯೆ ಪ್ರಕರಣ : ಎಸ್ಪಿ ಆನಂದಕುಮಾರ ಮಾಹಿತಿ ನೀಡಿರುವುದು.. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೌಡಿಶೀಟರ್ ಪ್ರದೀಪ ಎಂಟಮಾನ ಹತ್ಯೆ ಪ್ರಕರಣ ಸಂಬಂಧ ಸೋಮನಾಥ ಸೇರಿದಂತೆ 13 ಜನ ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ. ಹತ್ಯೆಯಾಗಿರುವ ಎಂಟಮಾನ ಆಲಮೇಲ ಪಟ್ಟಣ ಪಂಚಾಯತ್‌ನ 17ನೇ ವಾರ್ಡ್‌ಗೆ ಸ್ಪರ್ಧಿಸಲು ಎಲ್ಲಾ ತಯಾರಿ ಮಾಡಿಕೊಂಡಿದ್ದರು.
ಅದಕ್ಕಾಗಿ ಸೋಮನಾಥ ಸೇರಿದಂತೆ 13 ಜನ ಆರೋಪಿಗಳು ಕಟ್ಟಿಗೆ ಹಾಗೂ ಬಡಿಗೆಯಿಂದ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ. ಸದ್ಯ ಮೂವರನ್ನು ಬಂಧಿಸಲಾಗಿದೆ. ಉಳಿದ 10 ಜನರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ.
ರಾಜಕೀಯ ದ್ವೇಷಕ್ಕಾಗಿ ಹತ್ಯೆ ನಡೆದಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸದ್ಯ ಆಲಮೇಲ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು... ಪಟ್ಟಣ ಪಂಚಾಯತ್ ಮಾಜಿ ಸದಸ್ಯನ ಬರ್ಬರ ಕೊಲೆ