ವಿಜಯಪುರ: ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯದಲ್ಲಿ ಆರಂಭವಾಗಿರುವ ವಿದ್ಯುತ್ ಉತ್ಪಾದನೆ ಮತ್ತಷ್ಟು ವೇಗ ಪಡೆದುಕೊಂಡಿದೆ. ಜಲಾಶಯದ ಒಳಹರಿವು ಹೆಚ್ಚಾದಂತೆ ಹೊರಹರಿವನ್ನೂ ಹೆಚ್ಚಿಸಲಾಗಿದ್ದು, ಸದ್ಯ ಇಲ್ಲಿನ 6 ಜಲವಿದ್ಯುತ್ ಘಟಕದಿಂದ ಪ್ರತಿದಿನ 290 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯದ ಪ್ರಮುಖ ಘಟಕವಾಗಿರುವ ಜಲವಿದ್ಯುತ್ ಕೇಂದ್ರದ, ಐದು ಉತ್ಪಾದನೆ ಘಟಕದಲ್ಲಿ ಪ್ರತಿ ಘಟಕಗಳು 55 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿವೆ. ಇನ್ನೊಂದು ಘಟಕ 15 ಮೆಗಾವ್ಯಾಟ್ ಉತ್ಪಾದನೆ ಮಾಡುವ ಶಕ್ತಿ ಹೊಂದಿವೆ. ಈಗ ಎಲ್ಲಾ 6 ಘಟಕಗಳು ಆರಂಭಿಸಲಾಗಿದ್ದು, ಸದ್ಯ ಪ್ರತಿದಿನ 290 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಕಾರ್ಯ ನಡೆಯುತ್ತಿದೆ.